ಹೊಸದಿಗಂತ ಡಿಜಿಟಲ್ ಡೆಸ್ಕ್
ಶಿಕ್ಷಣ ಮಕ್ಕಳ ಜೀವನದಲ್ಲಿ ಪ್ರಮುಖವಾದ ಘಟ್ಟ. ಮಕ್ಕಳು ವಾಸಿಸುವ ಪರಿಸರ, ಅವರು ಭೇಟಿಯಾಗುವ ಜನರ ಜೊತೆಗೆ ಮುಖ್ಯವಾಗಿ ಅವರು ಆರಿಸಿಕೊಳ್ಳುವ ಸ್ನೇಹಿತರು ಮಕ್ಕಳ ಜೀವನದಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತಾರೆ. ಸ್ನೇಹಿತರು ಸಭ್ಯರಾಗಿದ್ದರೆ ಮಕ್ಕಳ ಮಕ್ಕಳ ಭವಿಷ್ಯವೂ ನಿಶ್ಚಿತ ಮಾರ್ಗದೆಡೆಗೆ ಸಾಗುತ್ತದೆ. ಅದರಂತೆ ಓರ್ವ ಕೆಟ್ಟ ಸ್ನೇಹಿತ ಇನ್ನೊಬ್ಬನ ದಾರಿ ತಪ್ಪಿಸಬಲ್ಲ. ಬಹಳಷ್ಟು ಪೋಷಕರಿಗೆ ಮಕ್ಕಳ ಸ್ನೇಹಿತರ ಬಗ್ಗೆ ತಿಳಿದಿರುವುದಿಲ್ಲ. ತಮ್ಮ ಮಕ್ಕಳ ಸ್ನೇಹಿತರು ಎಂತಹವರಿರುತ್ತಾರೋ ಎಂದು ಬಹಳಷ್ಟು ಪೋಷಕರು ಆತಂಕಿತರಾಗಿರುತ್ತಾರೆ. ಮಕ್ಕಳು ಎಂತಹವರ ಜೊತೆಗೆ ಸೇರುತ್ತಾರೆ, ಸ್ನೇಹಿತರಿಂದ ಅವರ ಜೀವನದಲ್ಲಿ ಸಂಭವಿಸಬಹುದಾದ ಬದಲಾವಣೆಗಳೇನು? ಈ ಕುರಿತು ಜೋತಿಷ್ಯ ಶಾಸ್ತ್ರದಿಂದಿಂದ ಅರಿತುಕೊಳ್ಳಬಹುದೇ? ಈ ಬಗ್ಗೆ ಡಾ. ಶಿವಕುಮಾರ ನಾಯನರ್ ಅವರು ಮಾಹಿತಿ ನೀಡುತ್ತಾರೆ ಕೇಳಿ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ