Thursday, August 11, 2022

Latest Posts

ರಾಶಿ ನೋಟು ಪತ್ತೆ ಬೆನ್ನಲ್ಲೇ ಬಂಗಾಳ ಸಚಿವನ ಜೊತೆ ಇಡಿ ಕಣ್ಣು ಬಿದ್ದ ಮೋನಾಲೀಸಾ ಯಾರು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಪಶ್ಚಿಮ ಬಂಗಾಳದಲ್ಲಿ ಶಿಕ್ಷಕರ ನೇಮಕಾತಿ ಹಗರಣಗಳ ಬೆನ್ನತ್ತಿರುವ ಇಡಿಯಿಂದ ಮತ್ತಷ್ಟು ರೋಚಕ ಸಂಗತಿಗಳು ಬಹಿರಂಗವಾಗುತ್ತಿದೆ. ಈಗಾಗಲೇ ಹಗರಣದಲ್ಲಿ ಶಿಕ್ಷಣ ಸಚಿವ ಪಾರ್ಥ್ ಚಟರ್ಜಿ ಮತ್ತು ಆಪ್ತೆ ನಟಿ ಅರ್ಪಿತಾ ಮುಖರ್ಜಿ ಶನಿವಾರ ಬಂಧನವಾಗಿದ್ದಾರೆ.

ಇದೀಗ ಖಾಜಿ ನಜರುಲ್ ಯೂನಿವರ್ಸಿಟಿಯ ಪ್ರೊಫೆಸರ್ ಮೋನಾಲೀಸಾ ದಾಸ್ ಅವರ ಮೇಲೆ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿದ್ದು, ಮತ್ತಷ್ಟು ಮಾಹಿತಿ ಹೊರಬರುತ್ತಿದೆ.

ನಟಿ ಅರ್ಪಿತಾ ಮುಖರ್ಜಿ ಅವರ ಮನೆಯಲ್ಲಿ 20 ಕೋಟಿ ರೂ ನಗದು ಹಣ ಪತ್ತೆಯಾಗಿತ್ತು. ಇದರ ಮೂಲ ಬೆನ್ನತ್ತಿದ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿಗಳಿಗೆ ಅರ್ಪಿತಾ ಜೊತೆ ಆಪ್ತವಾಗಿದ್ದ ಪಾರ್ಥ ಚಟರ್ಜಿಯ ಪಾತ್ರ ಇರುವುದು ತಿಳಿದುಬಂದಿತ್ತು. ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ಇಡಿ ಅಧಿಕಾರಿಗಳು ಬಂಧಿಸಿದ್ದರು.

ಇದೀಗ ಅರ್ಪಿತಾ ವಿಚಾರಣೆ ವೇಳೆ ಸಿಕ್ಕ ಸುಳಿವೊಂದರಲ್ಲಿ ಮೋನಾಲೀಸ ದಾಸ್ ಹೆಸರೂ ಕೇಳಿಬಂದಿದೆ. ಸಚಿವ ಪಾರ್ಥ ಚಟರ್ಜಿಯೊಂದಿಗೆ ಮೋನಾಲೀಸಾ ದಾಸ್ ಸಂಬಂಧ ಇರುವ ಸಂಗತಿಯೂ ಇಡಿಗೆ ತಿಳಿದುಬಂದಿದೆ.

ಇದರಿಂದ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮೋನಾಲೀಸಾ ಪಾತ್ರವೂ ಮಹತ್ತರದ್ದಾಗಿದೆ ಎಂಬುದು ಇಡಿ ಅನುಮಾನವಾಗಿದ್ದು, . ಇವರ ವಿಚಾರಣೆ ನಡೆಯುವ ನಿರೀಕ್ಷೆ ಇದೆ.

ಯಾರು ಮೋನಾಲೀಸಾ ದಾಸ್?

ಪಶ್ಚಿಮ ಬಂಗಾಳದ ಬರ್ಧನಾನ್ ಜಿಲ್ಲೆಯ ಆಸನಸೋಲ್ ನಗರದಲ್ಲಿರುವ ಸರಕಾರಿ ಸ್ವಾಮ್ಯದ ಕಾಜಿ ನಜರುಲ್ ವಿಶ್ವವಿದ್ಯಾಲಯದ ಬಂಗಾಳಿ ಭಾಷಾ ವಿಭಾಗದ ಮುಖ್ಯಸ್ಥೆಯಾಗಿದ್ದಾರೆ. ೨೦೧೩ರಲ್ಲಿ ಪಾರ್ಥ ಚಟರ್ಜಿ ಶಿಕ್ಷಣ ಸಚಿವರಾಗಿದ್ದಾಗ ಇವರನ್ನು ನೇರವಾಗಿ ಆ ಸ್ಥಾನಕ್ಕೆ ನೇಮಕ ಮಾಡಿಕೊಳ್ಳಲಾಗಿತ್ತು .

ಅಸಿಸ್ಟೆಂಟ್ ಪ್ರೊಫೆಸರ್ ಸ್ಥಾನದಿಂದ ಅಸೋಸಿಯೇಟ್ ಪ್ರೊಫೆಸರ್ ಶ್ರೇಣಿಗೆ ನೇರವಾಗಿ ಬಡ್ತಿ ಕೊಟ್ಟು ಇಲಾಖೆಯ ಮುಖ್ಯಸ್ಥ ಸ್ಥಾನಕ್ಕೆ ಮೋನಾಲೀಸಾವರನ್ನು ನೇರವಾಗಿ ನೇಮಕ ಮಾಡಿದ್ದು ಬಹಳಷ್ಟು ಅಚ್ಚರಿ ಉಂಟು ಮಾಡಿತ್ತು.ಪಾರ್ಥ್ ಚಟರ್ಜಿ ಜೊತೆ ಆಪ್ತವಾಗಿದ್ದ ಕಾರಣಕ್ಕೆ ಮೋನಾಲೀಸಾಗೆ ಈ ಅವಕಾಶ ಸಿಕ್ಕಿದೆ ಎನ್ನುವ ಮಾತು ಕೇಳಿಬರುತ್ತಿದೆ.

ಇದೀಗ ಮೋನಾಲೀಸಾ ದಾಸ್ ಅವರ ಆಸ್ತಿಪಾಸ್ತಿ ಇತ್ಯಾದಿ ಎಲ್ಲವನ್ನೂ ಇಡಿ ಅಧಿಕಾರಿಗಳು ತನಿಖೆ ನಡೆಸಿ ಪತ್ತೆ ಹಚ್ಚಿದ್ದಾರೆ. ಬೀರಭುಮ್ ಜಿಲ್ಲೆಯ ಬೋಲಪುರ್-ಶಾಂತಿನಿಕೇತನ್ ಮೊದಲಾದ ಕಡೆ ಹತ್ತಕ್ಕೂ ಹೆಚ್ಚು ಮನೆಗಳು ಮೋನಾಲೀಸಾ ಹೆಸರಲ್ಲಿ ಇವೆ.ಈ ಆಸ್ತಿಗಳ ಒಟ್ಟು ಮೌಲ್ಯಕ್ಕೂ ಮೋನಾಲೀಸಾ ದಾಸ್ ಅವರ ಘೋಷಿತ ಆದಾಯಕ್ಕೂ ತಾಳೆಯೇ ಆಗುತ್ತಿಲ್ಲ ಎಂದು ಇಡಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದರ ನಡುವೆ ಮೋನಾಲೀಸಾ ದಾಸ್ ಸಾಕಷ್ಟು ಬಾರಿ ಬಾಂಗ್ಲಾದೇಶಕ್ಕೆ ಹೋಗಿ ಬಂದಿದ್ದಿದೆ ಎಂದು ಪಶ್ಚಿಮ ಬಂಗಾಳ ನಾಯಕ ದಿಲೀಪ್ ಘೋಷ್ ಆರೋಪ ಮಾಡಿದ್ದಾರೆ.

ಬಂಗಾಳದ ಎಸ್‌ಎಸ್‌ಸಿ ಹಗರಣ ಬಹಳ ಆಳವಾಗಿದೆ. ಭ್ರಷ್ಟಾಚಾರದಿಂದ ಲೂಟಿ ಮಾಡಿದ ಹಣ ಜಿಹಾದಿಗಳಿಗೆ ಹರಿದುಹೋದರೆ, ಅಥವಾ ಹವಾಲಾ ಮೂಲಕ ಬಾಂಗ್ಲಾದೇಶಕ್ಕೆ ಸಾಗಿಹೋಗಿದ್ದರೆ ಅಚ್ಚರಿಯಂತೂ ಅಲ್ಲಎಂದು ದಿಲೀಪ್ ಘೋಷ್ ಟ್ವೀಟ್ ಮಾಡಿದ್ದಾರೆ.

ಆದರೆ ಮಾಜಿ ಸಚಿವ ಪಾರ್ಥ ಚಟರ್ಜಿ ಅವರೊಂದಿಗೆ ತನಗೆ ಸಂಬಂಧ ಇದೆ ಎಂಬ ಆರೋಪವನ್ನು ಮೋನಾಲೀಸಾ ದಾಸ್ ತಳ್ಳಿಹಾಕಿದ್ದಾರೆ. ಆಗ ಶಿಕ್ಷಣ ಸಚಿವರಾಗಿದ್ದ ಕಾರಣ ಪಾರ್ಥ ಚಟರ್ಜಿಯನ್ನು ನಾನೊಬ್ಬ ಶಿಕ್ಷಕಿಯಾಗಿ ಬಲ್ಲೆ. ಅವರು ನನಗೆ ಒಂದು ರೀತಿಯಲ್ಲಿ ಅವರು ಗಾರ್ಡಿಯನ್ ಇದ್ದಂತೆಎಂದು ಮೋನಾಲೀಸಾ ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss