ಸಿಎಂ ಪಟ್ಟ ಯಾರಿಗೆ?: ಕುರ್ಚಿ ಫೈಟ್‌ಗೆ ಎಂಟ್ರಿ ಕೊಟ್ಟ ಪ್ರಬಲ ಸಮುದಾಯಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪಷ್ಟ ಬಹುಮತವನ್ನು ಪಡೆದುಕೊಂಡಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಹುದ್ದೆ ಆಯ್ಕೆಗೆ ಸಮುದಾಯಗಳು ಹಾಗೂ ಅದರ ಮುಖಂಡರು ಭಾರಿ ಕಸರತ್ತು ಮುಂದುವರೆಸಿದ್ದಾರೆ.

ಲಿಂಗಾಯತ, ಒಕ್ಕಲಿಗ, ಕುರುಬ ಹಾಗೂ ದಲಿತ ಸಮುದಾಯಗಳು ತಮ್ಮವರನ್ನೇ ಮುಖ್ಯಮಂತ್ರಿ ಮಾಡಬೇಕು ಎಂದು ಪಟ್ಟು ಹಿಡಿದ್ದಾರೆ. ಇದರಿಂದ ಕಾಂಗ್ರೆಸ್‌ ಹೈಕಮಾಂಡ್‌ಗೆ ಟೆನ್ಶನ್‌ ಆರಂಭವಾಗಿದ್ದು, ಇಂದು ನಡೆಯುವ ಶಾಸಕಾಂಗ ಸಭೆಯಲ್ಲಿಯೂ ಸಿಎಂ ಆಯ್ಕೆಗೆ ಅಂತಿಮ ತೀರ್ಮಾನ ಹೊರಬರುವ ಸಾಧ್ಯತೆವಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್‌ ಅವರೇ ಮುಖ್ಯಮಂತ್ರಿಯಾಗಬೇಕು ಎಂದು ಒಕ್ಕಲಿಗ ಸಮುದಾಯದ ಮುಖಂಡರಿಂದ ಸಭೆ ಮಾಡಲಾಗಿದೆ. ವಿಜಯನಗರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಭೆ ನಡೆಸಲಾಗಿದ್ದು, ಒಕ್ಕಗಲಿರ ಸಂಘದ ಪದಾಧಿಕಾರಿಗಳು, ಒಕ್ಕಲಿಗಪರ ಸಂಘಟನೆಗಳು, ಸರ್ಕಾರಿ ನಿವೃತ್ತ ಅಧಿಕಾರಿಗಳು ಭಾಗಿಯಾಗಿದ್ದರು.
ಈ ಸಭೆಯಲ್ಲಿ ಒಕ್ಕಲಿಗ ಸಮುದಾಯಕ್ಕೆ ಸಿಎಂ ಸ್ಥಾನ ನೀಡುವಂತೆ ಒತ್ತಡ ಹೇರಲು ನಿರ್ಧಾರ ಮಾಡಲಾಯಿತು.

ಡಿಕೆಶಿಗೆ ಸಿಎಂ ಹುದ್ದೆಯೂ ಸಿಗಲಿ:
ಇಂದು ಎಲ್ಲರ ಹೃದಯದಲ್ಲೇ ಒಕ್ಕಲಿಗ ಮುಖಂಡರೇ ಸಿಎಂ ಆಗಬೇಕೆನ್ನುವುದು ಇದೆ. ನಮ್ಮವರೆಯಾದ ವ್ಯಕ್ತಿ ಡಿಕೆ ಶಿವಕುಮಾರ್, ಪಕ್ಷವನ್ನ ಮೇಲೆ ಎತ್ತಿ ಅಧಿಕಾರ ಹಿಡುವಂತೆ ಮಾಡಿದ್ದಾರೆ. ಸಂಪ್ರದಾಯದಂತೆ ಮನೆಯ ಅಧ್ಯಕ್ಷ ಯಾರ್ ಇರುತ್ತಾರೋ, ಅವರೇ ರಾಜ್ಯವನ್ನ ಮುನ್ನಡೆಸುತ್ತಾರೆ. ಹಾಗೇ ಮುಂದುವರೆಸಿಕೊಂಡು ಹೋಗಿ ಅನ್ನೋದು ನಮ್ಮ ಅಶಯ. ಎಲ್ಲಾ ಮಾನದಂಡಗಳಿಂದಲ್ಲೂ ಅರ್ಹರಿದ್ದಾರೆ ನಮ್ಮ ಡಿಕೆಶಿವಕುಮಾರ್. ಸೋನಿಯಾ, ಸಿದ್ದರಾಮಯ್ಯ ಖರ್ಗೆಯವರು ಡಿಕೆಶಿಯವರಿಗೆ ಕೊಡಬೇಕು ಕೊಡ್ತಾರೆ ಅಂತ ಭಾವಿಸಿದ್ದೇನೆ. ಶ್ರಮಫಟ್ಟವರಿಗೆ ಫಲ ಸಿಗಬೇಕು. ಸಹಜವಾಗಿ ಅಧ್ಯಕ್ಷರಾದರನ್ನ ಮುಖ್ಯಮಂತ್ರಿ ಮಾಡಬೇಕು ಅದು ಮಾಡ್ತಾರೆ ಅಂತ ನಾನು ಭಾವಿಸುತ್ತೇನೆ. ಸಹಜವಾಗಿ ಅವರಿಗೆ ಸಿಗುವ ಸ್ಥಾನ ಸಿಗಲಿ. ನಾಳೆ ಅವರ ಹುಟ್ಟು ಹಬ್ಬ ಜೊತೆ ಸಿಎಂ ಹುದ್ದೆ ಸಹ ಸಿಗಲಿ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಾಲನಂದನಾಥ ಸ್ವಾಮೀಜಿ ಹೇಳಿದ್ದಾರೆ.

ಸಿದ್ದರಾಮಯ್ಯರನ್ನು ಸಿಎಂ ಮಾಡುವಂತೆ ಕುರುಬರ ಪಟ್ಟು
ಇದರ ನಡುವೆ ಕುರುಬ ಸಮುದಾಯದಿಂದಲೂ ಕೂಡ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಪಟ್ಟು ಹಿಡಿದು ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶದಿಂದಲೇ ಕುರುಬ ಸಮುದಾಯದ ಎಲ್ಲ ಜನರೂ ಕೂಡ ಒಕ್ಕೂರಲಾಗಿ ಕಾಂಗ್ರೆಸ್‌ಗೆ ಮತವನ್ನು ಹಾಕಿದ್ದು, ಬಹುಮತ ತರಲು ಶ್ರಮಿಸಿದ್ದೇವೆ. ಈಗ ಅವರು ರಾಜ್ಯಾದ್ಯಂತ ಪಕ್ಷವನ್ನು ಸಂಘಟನೆ ಮಾಡಿ ಬಹುಮತ ಗಳಿಸಲು ಕಾರಣವಾಗಿದ್ದು, ಅವರಿಗೆ ಮೊದಲ ಹಂತದಲ್ಲಿ ಸಿಎಂ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದು ಹೈಕಮಾಂಡ್‌ಗೆ ಒತ್ತಡ ಹೇರಿದ್ದಾರೆ.

ದಲಿತ ಪರಮೇಶ್ವರ್‌ಗೆ ಸಿಎಂ ಹುದ್ದೆ ಕೊಡಿ
ರಾಜ್ಯದಲ್ಲಿ 2013ರಲ್ಲಿಯೇ ಕಾಂಗ್ರೆಸ್‌ ಬಹುಮತ ಬಂದಾಗ ದಲಿತ ಮುಖ್ಯಮಂತ್ರಿ ಆಗಬೇಕಿದ್ದ ಜಿ. ಪರಮೇಶ್ವರ್‌ ಅವರನ್ನು ಕುಂತ್ರ ಮಾಡಿ ಸೋಲಿಸಿ, ಸಿಎಂ ಹುದ್ಎಯಿಮದ ವಂಚಿರಾಗುವಂತೆ ಮಾಡಲಾಯಿತು. ಆದರೆ, ಈಗ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದ್ದು, ದಲಿತ ಮುಖ್ಯಮಂತ್ರಿ ಮಾಡಬೇಕು ಎಂದು ದಲಿತ ಸಮುದಾಯಗಳು ಪಟ್ಟು ಹಿಡಿದಿವೆ. ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ದಲಿತ ಸಿಎಂ ಕೂಗು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಸಂವಿಧಾನದ ಮೇಲೆ ಪ್ರೀತಿ ಇದ್ದರೆ ದಲಿತರನ್ನೇ ಸಿಎಂ ಮಾಡಲಿ. ರಾಜ್ಯದಲ್ಲಿ ಕಾಂಗ್ರೆಸ್ 136 ಸೀಟ್ ಗಳನ್ನು ಗೆದ್ದಿದೆ. ಪ್ರಿಯಾಂಕ ಖರ್ಗೆ, ಪರಮೇಶ್ವರ್, ಮುನಿಯಪ್ಪ ಅವರಲ್ಲಿ ಒಬ್ಬರನ್ನ ಸಿಎಂ ಮಾಡಲಿ ಎಂದು ಚಿಕ್ಕಮಗಳೂರಿನಲ್ಲಿ ದಲಿತ ಮುಖಂಡ ಮೋಹನ್ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!