ಪ್ರಜ್ವಲ್ ಚಾಲಕನನ್ನು ಮಲೇಷ್ಯಾಗೆ ಕಳಿಸಿದ್ದು ಯಾರು?ನನ್ನ ಕೆಣಿಕಿದ್ದಾರೆ ಸುಮ್ಮನೆ ಬಿಡಲ್ಲ: ಕುಮಾರಸ್ವಾಮಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣ ಸಂಬಂಧ ಮಾತಿನ ಜಟಾಪಟಿ ಜೋರಾಗಿದ್ದು,. ಡಿಕೆ ಸಹೋದರು ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪವನ್ನೇ ಮಾಡಿದ್ದಾರೆ. ಇದೀಗ ಡಿಕೆ ಸಹೋದರರ ಆರೋಪಕ್ಕೆ ಕುಮಾರಸ್ವಾಮಿ (HD Kumaraswamy) ಕೆಂಡಮಂಡಲರಾಗಿದ್ದು, ಪ್ರಜ್ವಲ್ ರೇವಣ್ಣನ ಡ್ರೈವರ್ ಆಗಿದ್ದ ಕಾರ್ತಿಕ್​ನನ್ನ ಮಲೆಷ್ಯಾಗೆ ಕಳಿಸಿದ್ಯಾರು ಎಂದು ಪ್ರಶ್ನಿಸುವ ಮೂಲಕ​ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ಡ್ರೈವರ್ ವಿಡಿಯೋ ರಿಲೀಸ್ ಮಾಡಿದ್ನಲ್ವಾ? ಆತ ಮಾತನಾಡಿರುವ ವಿಡಿಯೋ ಯಾರು ಮಾಡಿದ್ದು? ನಿನ್ನೆ ಅವನ‌ ಕೈಯಲ್ಲಿ ವಿಡಿಯೋ ಬಿಟ್ಟಿದ್ರು, ಏನ್ ಹೇಳಿಕೆ ಕೊಟ್ಟಾ, ದೇವರಾಜ್ ಕೈಯಲ್ಲಿ ಪೆನ್​ಡ್ರೈವ್ ಕೊಟ್ಟಿದ್ದೆ ಅಂತಾ ಹೇಳಿದ್ದ. ಆದರೆ ಇಂದು ಬೆಳಗ್ಗೆ ಈ ಚಿಲ್ಲರೆ ಸಹೋದರರು ಕುಮಾರಸ್ವಾಮಿನೇ ಬಿಟ್ಟಿರಬೇಕು ಅಂತಾ ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ್ದಾರೆ.

ದೇವರಾಜ್ ಮೊದಲು ನನ್ನನ್ನು ಭೇಟಿಯಾಗಿದ್ದಾನೆಂದು ಈ 420ಗಳು ಹೇಳಿದ್ದಾರೆ. ಎಲ್ಲಿಂದ ವಿಡಿಯೋ ಮಾಡಿ ಬಿಟ್ಟಿದ್ದಾನೆ ಅದನ್ನು ಮೊದಲು ತಿಳಿದುಕೊಳ್ಳಿ. ಸುಲಭವಾಗಿ ನಮ್ಮನು ಕೆಣಕಿದರೆ ನಾವು ಸುಮ್ಮನೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!