ಹೊಸದಿಗಂತ ವರದಿ, ಅಂಕೋಲಾ:
ಯಾವ ಪದ್ಧತಿಯಲ್ಲಿ ಸಿದ್ಧಪಡಿಸಿದ ಮಾಂಸ ತಿನ್ನಬೇಕು ಎನ್ನುವುದು ತಿನ್ನುವವರ ವೈಯಕ್ತಿಕ ವಿಚಾರ ಜಟ್ಕಾ ಹಿಂದುಗಳ ಪದ್ಧತಿ ಹಲಾಲ್ ಮುಸಲ್ಮಾನರ ಪದ್ಧತಿ ಯಾರಿಗೆ ಹೇಗೆ ಬೇಕು ಹಾಗೆ ತಿನ್ನಲಿ ಇದರಲ್ಲಿ ಸಂಘರ್ಷ ಮಾಡುವಂತದ್ದು ಏನೂ ಇಲ್ಲ ಎಂದು ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಟ ಹೇಳಿದ್ದಾರೆ.
ಬಳಲೆಯಲ್ಲಿ ನಡೆದ ಬಹುಗ್ರಾಮ ಕುಡಿಯುವ ನೀರು ಯೋಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾರಿಗೆ ಯಾವುದು ಇಷ್ಟವಿಲ್ಲವೋ ಅದನ್ನು ಹೇರುವುದು ತಪ್ಪು ಅವರವರ ಧರ್ಮದ ಪದ್ಧತಿಯನ್ನು ಅನುಸರಿಸಿದರೆ ಆಯ್ತು ಇದರಿಂದಾಗಿ ಕುರಿಗಾಹಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ
ಎಂದು ಹೇಳಿದರು.
ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇದದ ಕುರಿತು ರಾಜ್ ಠಾಕ್ರೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಟ ಧ್ವನಿವರ್ಧಕದ ಬಳಕೆಯಿಂದ ವಿದ್ಯಾರ್ಥಿಗಳಿಗೆ, ವಯೋವೃದ್ಧರಿಗೆ ತೊಂದರೆ ಆಗುತ್ತದೆ ಎನ್ನುವ ಮಾತುಗಳು ಬಹಳ ವರ್ಷಗಳಿಂದ ಕೇಳಿ ಬರುತ್ತಿದೆ, ಕೆಲವೊಮ್ಮೆ ಇದು ಧರ್ಮ ಸಂಘರ್ಷಗಳಿಗೂ ಕಾರಣವಾಗುವುದುಂಟು ಇದರ ಕುರಿತು ಮುಸ್ಲಿಂ ಸಮಾಜವನ್ನು ಒಪ್ಪಿಸುವ ಕೆಲಸ ಆಗಬೇಕು, ಮಸೀದಿ ಒಳಗೆ ಮಾತ್ರ ಕೇಳುವಂತೆ ಧ್ವನಿವರ್ಧಕಗಳ ಬಳಕೆ ಸೂಕ್ತ ಎಂದರು.
ಸಿದ್ಧರಾಮಯ್ಯ,ಡಿ.ಕೆ.ಶಿವಕುಮಾರ್ ಮತ್ತು ಕುಮಾರಸ್ವಾಮಿಯವರಿಗೆ ದೇಶದ್ರೋಹಿಗಳನ್ನು ಎದುರು ಹಾಕಿಕ್ಕೊಳ್ಳುವ ಧೈರ್ಯ ಇಲ್ಲ, ವೋಟಿಗಾಗಿ ದೇಶ ದ್ರೋಹದ ಕೃತ್ಯ ಎಸಗುವವರಿಗೆ ಬೆಂಬಲ ನೀಡಿ ಸಮಾಜಕ್ಕೆ ದ್ರೋಹ ಎಸಗುತ್ತಿರುವ ಈ ಮೂವರು ಧರ್ಮ ಸಂಸ್ಥಾಪಕ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಅವತರಿಸಿರುವ ತ್ರಿಮೂರ್ತಿಗಳು ಎಂದು ವ್ಯಂಗ್ಯ ಮಾಡಿದ ಈಶ್ವರಪ್ಟ ಉತ್ತರ ಭಾರತದಲ್ಲಿ ರಾಹುಲ್ ಗಾಂಧಿ ಹೋದಲ್ಲೆಲ್ಲ ಕಾಂಗ್ರೆಸ್ ಸರ್ವನಾಶವಾಗಿದೆ ಅವರು ರಾಜ್ಯಕ್ಕೆ ಬಂದರೂ ಅದೇ ಗತಿ ರಾಹುಲ್ ಗಾಂಧಿ ಕರ್ನಾಟಕ ಪ್ರವಾಸಕ್ಕೆ ಬಂದರೆ ಅವರ ಹೋಗಿ ಬರುವ ಖರ್ಚು ನೋಡಿಕೊಳ್ಳುವುದಾಗಿ ಸಚಿವ ಈಶ್ವರಪ್ಟ ಲೇವಡಿ ಮಾಡಿದರು.