ಮುಜರಾಯಿ ಇಲಾಖೆ ಆರ್‌ಎಸ್‌ಎಸ್‌ಗೆ ಕೊಡ್ತೀವಿ ಎಂದು ಸಿದ್ದರಾಮಯ್ಯಗೆ ಅಂದವರು ಯಾರು?: ಸಚಿವ ಕೋಟ ಪ್ರಶ್ನೆ

ಹೊಸದಿಗಂತ ವರದಿ, ಚಿತ್ರದುರ್ಗ:

ಮುಜರಾಯಿ ಇಲಾಖೆಯನ್ನು ಆರ್‌ಎಸ್‌ಎಸ್‌ಗೆ ಕೊಡುತ್ತೇವೆ ಎಂದು ಸಿದ್ದರಾಮಯ್ಯಗೆ ಯಾರು ಹೇಳಿದರು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಎಲ್ಲಾ ಧರ್ಮದವರು ಅವರವರ ಧಾರ್ಮಿಕ ಕೇಂದ್ರಗಳ ಜವಬ್ದಾರಿಯನ್ನು ನಿರ್ವಹಿಸುವಾಗ, ಹಿಂದೂ ಧಾರ್ಮಿಕ ಕೇಂದ್ರಗಳ ಜವಬ್ದಾರಿಯನ್ನು ಹಿಂದೂಗಳಿಗೆ ನೀಡುತ್ತಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ. ಆದರೆ ದೇವಸ್ಥಾನಗಳನ್ನು ಅಥವಾ ಮುಜರಾಯಿ ಇಲಾಖೆಯನ್ನು ಆರ್‌ಎಸ್‌ಎಸ್‌ಗೆ ನೀಡುತ್ತೇವೆಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಜೈನ, ಪಾರ್ಸಿ, ಮುಸ್ಲಿಂ ಜನಾಂಗದಿಂದ ಆಯಾ ಧಾರ್ಮಿಕ ಕೇಂದ್ರ ನಿರ್ವಹಣೆ.ಹಿಂದೂ ದೇಗುಲಗಳನ್ನು ಹಿಂದೂಗಳ ಕೈಗೆ ಕೊಡಿ ಎಂಬ ಬೇಡಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ ಈ ಬಗ್ಗೆ ಮಾತನಾಡಿದ್ದಾರೆ.ವಿಪಕ್ಷ ನಾಯಕ ಸಿದ್ಧರಾಮಯ್ಯ ಸ್ವಾಗತಿಸುತ್ತಾರೆಂದು ಭಾವಿಸಿದ್ದೆವು.ನಮ್ಮ ಯಾವ ಕೆಲಸವೂ ಸ್ವಾಗತಿಸುವ ಮಾನಸಿಕತೆ ಅವರಿಗಿಲ್ಲ ಎಂದರು.
ಮೇಕೆದಾಟು ಪಾದಯಾತ್ರೆ ಹತ್ತಿಕ್ಕುವ ಸಲುವಾಗಿ ಬಿಜೆಪಿ ಸರ್ಕಾರ ವೀಕೆಂಡ್ ಕರ್ಪ್ಯೂ ಜಾರಿ ಮಾಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ಅವರವರ ಭಾವನೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ಆದರೆ ಕೊರೋನಾ ಇರುವುದರಿಂದ ಕೆಲವೊಂದು ನಿಯಂತ್ರಣಕ್ಕೆ ಒಳಪಟ್ಟು, ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಜನಾರ್ಶಿವಾದ ಯಾತ್ರೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಆ ಸಮಯದಲ್ಲಿ ಕೋವಿಡ್ ನಿಯಂತ್ರಣ ಬಂದಿದ್ದಾಗ ಕೋವಿಡ್ ಗೈಡ್‌ಲೈನ್‌ನಲ್ಲಿ ಜನಾರ್ಶಿವಾದ ಯಾತ್ರೆ ಮಾಡಲಾಗಿತ್ತು. ಆದರೆ ಈಗ ಕೋವಿಡ್ ಮೂರನೇ ಅಲೆ ಒಮಿಕ್ರಾನ್ ಹೆಚ್ಚುತ್ತಿದೆ. ಆದ ಕಾರಣ ಎಲ್ಲರೂ ಜವಬ್ದಾರಿಯಿಂದ ವರ್ತಿಸಬೇಕು ಎಂದು ಹೇಳಿದರು.
೧೪೪ ಸೆಕ್ಷನ್ ಹಾಕಿದ್ರೂ ಪಾದಯಾತ್ರೆ ಮಾಡುತ್ತೇವೆಂದರೆ ಅವರೇ ತೀರ್ಮಾನಿಸಲಿ. ಯಾರದ್ದೋ ಹೋರಾಟ ನಿಲ್ಲಿಸಲು ಕೊವಿಡ್ ಬಂದಿದ್ದಲ್ಲ. ಸಿಎಂ ಸ್ಥಾನದಲ್ಲಿದ್ದವರು, ಸಿಎಂ ಆಗ್ತೀನಿ ಅನ್ನುವವರು ಗಮನಿಸಲಿ. ತುಂಬಾ ಜನ ನಾವೇ ಬುದ್ಧಿವಂತರು, ಬೇರೆಯವರಿಗೆ ಬುದ್ಧಿ ಇಲ್ಲ ಅಂದುಕೊಂಡಿರುತ್ತಾರೆ. ಅದು ಅವರವರ ಮಾನಿಸಿಕತೆಗೆ ಸಂಬಂಧಪಟ್ಟ ವಿಚಾರ ಎಂದು ಮಾರ್ಮಿಕವಾಗಿ ನುಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!