Friday, June 9, 2023

Latest Posts

ಪಾದಯಾತ್ರೆ ಕಾಂಗ್ರೆಸ್ ರಾಜಕೀಯ ಗಿಮಿಕ್: ಗೋವಿಂದ ಕಾರಜೋಳ ಆರೋಪ

ಹೊಸದಿಗಂತ ವರದಿ, ಚಿತ್ರದುರ್ಗ:

ಕಾಂಗ್ರೆಸ್ ಮೇಕೆದಾಟು ಹೋರಾಟ ರಾಜಕೀಯ ಗಿಮಿಕ್ ರೀತಿಯಿದೆ. ತಮಿಳುನಾಡಿನಲ್ಲಿ ಡಿಎಂಕೆ ಜತೆ ಸೇರಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ತಮಿಳುನಾಡು ಕ್ಯಾತೆ ತೆಗೆಯದಂತೆ ಸಿದ್ದರಾಮಯ್ಯ ಬುದ್ದಿ ಹೇಳಲಿ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ೨೦೧೩ ರಿಂದ ೨೦೧೮ ರವರೆಗೆ ರಾಜ್ಯದಲ್ಲಿ ಆಡಳಿತ ನಡೆಸಿದೆ. ಆಗ ನೀರಾವರಿ ಯೋಜನೆ ಬಗ್ಗೆ ಗಮನಹರಿಸದೆ ಕುಂಭಕರ್ಣ ನಿದ್ದೆ ಮಾಡಿದೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಾಣ ಹೋದರೂ ಸರಿ ಹೋರಾಟ ಬಿಡಲ್ಲ ಎಂದು ಹೇಳಿದ್ದರು. ಎಲ್ಲರಿಗೂ ಹೋರಾಟ ಮಾಡುವ ಹಕ್ಕು ಇರುತ್ತೆ. ಪ್ರಾಣ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ, ಕಾಂಗ್ರೆಸ್ ನಾಯಕರು ಮೇಕದಾಟುನಿಂದ ಫ್ರೀಡಂ ಪಾರ್ಕ್‌ತನಕ ಪಾದಯಾತ್ರೆ ಹಮ್ಮಿಕೊಂಡಿದ್ದರು. ಆದರೆ ಇದೀಗ ಕೊರೋನಾ ಟಫ್ ರೂಲ್ಸ್ ಜಾರಿಗೆ ತಂದಿರುವ ಕಾರಣ ಪಾದಯಾತ್ರೆ ಬದಲು, ಅವಕಾಶ ಇರುವಷ್ಟು ಜನ ನಡಿಗೆ ಮಾಡಲು ನಿರ್ಧರಿಸಿದ್ದಾರೆ. ಸಿದ್ದರಾಮಯ್ಯ, ಡಿಎಂಕೆ ಸೇರಿ ಸಹಕರಿಸಿ ಕರ್ನಾಟಕಕ್ಕೆ ಉಪಕರಿಸಲಿ ಎಂದರು.
ಕಾಂಗ್ರೆಸ್ ನವರಿಂದ ಭ್ರಮೆ ಹುಟ್ಟಿಸಿ ಜನರಿಗೆ ಮೋಸ. ಕಾಂಗ್ರೆಸ್ ಹೊಣೆಗೇಡಿತನದಿಂದ ರಾಜ್ಯದ ಯೋಜನೆಗಳ ಪ್ರಗತಿ ಕುಂಠಿತವಾಗಿದೆ. ಮೇಕೆದಾಟು ಹೋರಾಟಕ್ಕೆ ಇಬ್ಬರಾದರೂ ಹೋಗಲಿ, ಇನ್ನೂರು ಜನರಾದರೂ ಹೋಗಲಿ. ಸಿದ್ದರಾಮಯ್ಯ, ಕಾಂಗ್ರೆಸ್ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!