ಹೊಸದಿಗಂತ ವರದಿ, ವಿಜಯಪುರ:
ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟದಂತಹ ಕೃತ್ಯ ಎಸಗಿದವನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಎಂ.ಬಿ. ಪಾಟೀಲ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶರಣಪ್ರಕಾಶ ಪಾಟೀಲ ಹೇಳಿಕೆ ನಾನು ಗಮನಿಸಿಲ್ಲ. ಕೃತ್ಯ ಯಾರು ಎಸಗಿದ್ದಾರೆ, ಯಾಕೆ ಎಸಗಿದ್ದಾರೆ ಅಂತ ತನಿಖೆ ನಡೆಯುತ್ತಿದೆ. ಇದೊಂದು ಗಂಭೀರ ಪ್ರಕರಣ, ತನಿಖೆ ನಡೆಯುತ್ತಿದೆ ಎಂದರು.
ಶರಣಪ್ರಕಾಶ ಪಾಟೀಲ ಯಾವ ರೀತಿ ಏನು ಹೇಳಿದ್ದಾರೆ ಅಂತ ನನಗೆ ಗೊತ್ತಿಲ್ಲ. ಇದು ಉಗ್ರರ ಕೃತ್ಯನೋ ಮತ್ತೇನು ಬೇರೆನೋ ಅನ್ನೋದು ಗೊತ್ತಾಗಬೇಕಿದೆ. ಇದರ ಮೂಲ ಏನು ಅನ್ನೋದು ಸಂಪೂರ್ಣ ಹೊರಗೆ ತೆಗೆಯಬೇಕು ಎಂದರು.
ದೇಶದ ಹಿತ,ಜನರ ರಕ್ಷಣೆ ವಿಷಯ ಬಂದಾಗ ಪಕ್ಷ ಮುಖ್ಯವಲ್ಲ ರಾಷ್ಟ್ರ ಮುಖ್ಯ. ರಾಷ್ಟ್ರದ ಹಿತ ಕಾಪಾಡುವ ಕೆಲಸ ಮಾಡುತ್ತೇವೆ ಎಂದರು.