ಹೊಸದಿಗಂತ ಡಿಜಿಟಲ್ ಡೆಸ್ಕ್:
ನಿಮ್ಮ ಕಿಚನ್ ನಲ್ಲಿರುವ ಸ್ಟೀಲ್ ಪಾತ್ರೆಗಳ ತಳಭಾಗದಲ್ಲೋ, ಅಂಚುಗಳಲ್ಲೋ ತೂತಾಗಿವೆಯೇ? ದ್ರವ ಪದಾರ್ಥಗಳನ್ನು ಅದರಲ್ಲಿಡಲು ಕಷ್ಟ ಸಾಧ್ಯವಾಗುತ್ತದೆಯೇ…? ಟೆನ್ಶನ್ ಬಿಟ್ಟು ಬಿಡಿ. ಈ ಟೆಕ್ನಿಕ್ ಬಳಸಿ. ಆ ಸ್ಟೀಲ್ ಪಾತ್ರೆಯನ್ನು ಮರುಬಳಕೆ ಮಾಡಬಹುದು! ಹೇಗಂತೀರಾ…
ಮನೆಯಲ್ಲಿಯೇ ಲಭ್ಯವಿರುವ ನೈಲ್ ಪಾಲಿಶ್ ಈ ತೂತುಗಳನ್ನು ಸರಿಮಾಡುವ ಸಾಮರ್ಥ್ಯ ಹೊಂದಿವೆ!. ಹೌದು ತೂತಿರುವ ಭಾಗಕ್ಕೆ ಎರಡು ಡ್ರಾಪ್ ನೈಲ್ ಪಾಲಿಶ್ ಬಿಡಿ. ಅದು ಸಂಪೂರ್ಣ ಒಣಗಿದ ನಂತರ ಇನ್ನೆರಡು ಬಾರಿ ನೈಲ್ ಪಾಲಿಶ್ ಅನ್ನು ಅದೇ ಜಾಗಕ್ಕೆ ಹಚ್ಚಿಕೊಳ್ಳಿ. ಅದು ಸಂಪೂರ್ಣ ಒಣಗಿದ ನಂತರ ನೀವು ಏನು ಬೇಕಾದರೂ ತುಂಬಿಟ್ಟುಕೊಳ್ಳಿ. ಸ್ಟೀಲ್ ಪಾತ್ರೆಯನ್ನು ಮೊದಲಿನಂತೆಯೇ ಬಳಕೆ ಮಾಡಬಹುದಾಗಿದೆ.!