MUST READ | ಯಾವಾಗ್ಲೂ ಕಷ್ಟದ ದಾರಿಯನ್ನೇ ಯಾಕೆ ಆರಿಸಬೇಕು? ಸುಲಭದ ದಾರಿ ಸುಲಭ ಅಲ್ವಾ?

ಸ್ಕೂಬಾ ಡೈವಿಂಗ್ ಯಾರಿಗಿಷ್ಟ ಇಲ್ಲ ಹೇಳಿ? ನೀರಿನಾಳದಲ್ಲಿ ಏನಿದೆ? ಎಷ್ಟು ವಿಭಿನ್ನ ಜಲಚರಗಳಿವೆ ನೋಡೋಣ ಅಂತ ಅನಿಸೋದು ಮಾಮೂಲಿ. ಆದರೆ ಎಲ್ಲರಿಗೂ ಇದು ಸಾಧ್ಯವಿಲ್ಲ. ಪ್ರಾಪರ್ ಟ್ರೇನಿಂಗ್ ಬೇಕಲ್ವಾ?

The World's Best Scuba Diving Destinationsಆ ಹುಡುಗಿಗೆ ನೀರಂದ್ರೆ ಆಸೆ, ಸ್ಕೂಬಾ ಡೈವಿಂಗ್ ಮಾಡಬೇಕು ಅಂತಲೇ ತಿಂಗಳಾನುಗಟ್ಟಲೆ ಟ್ರೈನಿಂಗ್ ತೆಗೆದುಕೊಂಡಿದ್ಲು. ಅವಳ ಫ್ರೆಂಡ್‌ಗೂ ಅಷ್ಟೇ ನೀರಿನಲ್ಲಿ ಈಜಾಡಬೇಕು, ಸ್ಕೂಬಾ ಡೈವಿಂಗ್ ಮಾಡಬೇಕು ಅನ್ನೋ ಆಸೆ. ಆದರೆ ಟ್ರೈನಿಂಗ್ ಎಲ್ಲಾ ಯಾಕೆ? ನೀರಲ್ಲಿ ಉಸಿರಾಡೋಕೆ ಎಲ್ಲಾ ಕೊಟ್ಟಿರ‍್ತಾರೆ, ಕಾಲು ಬಡೀತಾ ಮುಂದೆ ಹೋದ್ರೆ ಆಯ್ತು ಅನ್ನೋದು ಅವಳ ಅಂದಾಜಾಗಿತ್ತು.

8 Amazing Scuba Diving Destinations in the U.S.ಹೀಗೆ ಒಂದು ದಿನ ಇದ್ದಕ್ಕಿದ್ದಂತೆ ಡಿಸೈಡ್ ಮಾಡಿ ಟ್ರಿಪ್ ಹೋಗೇಬಿಟ್ಲು. ಟ್ರೈನಿಂಗ್ ಇಲ್ಲದೆ ನೀರಿಗೆ ಹಾರಿಬಿಟ್ಲು. ಜೊತೆಗೆ ಟ್ರೈನರ್ ಏನೋ ಇದ್ರು. ಆದ್ರೆ ಅವರು ಕಲಿಸಿಕೊಟ್ಟ ಸೈನ್ ಲಾಂಗ್ವೇಜ್ ಮೇಲೆ ಈಕೆಗೆ ಗಮನ ಇರಲಿಲ್ಲ. ಕಾಲು ಬಡೀತಾ ಮುಂದೆ ಮುಂದೆ ಹೋದ್ಲು. ಅಬ್ಬಾ ಸ್ವರ್ಗ. ಮುಂಚೆನೇ ಈ ಕೆಲಸ ಮಾಡ್ಬಾರ್ದಿತ್ತಾ ಅಂದುಕೊಂಡಳು.

Boat Diving at Havelock Island, Andaman |ಟ್ರೈನರ್ ಕೈಯನ್ನು ವೇವ್ ಮಾಡ್ತಾ ಇದ್ರು. ನಿಲ್ಲಿಸಲೇ ಇಲ್ಲ, ಪದೇ ಪದೆ ವೇವ್ ಮಾಡ್ತಾನೇ ಇದ್ರು. ಇವಳಿಗೆ ಅನಿಸ್ತು, ನಾನು ಟ್ರೈನಿಂಗ್ ಇಲ್ಲದೆ ಎಷ್ಟ್ ಚನಾಗಿ ಈಜ್ತಾ ಇದಿನಿ ಅಂತ ಭೇಷ್ ಅಂತಿದ್ದಾರೆ, ಮುಂದೆ ಹೋಗು ಮುಂದೆ ಹೋಗು ಅಂತಿದ್ದಾರೆ ಅಂದುಕೊಂಡ್ಲು. ಆದರೆ ಟ್ರೇನರ್ ಹೇಳಿದ್ದು ಸಾಕು ಮುಂದೆ ಹೋಗ್ಬೇಡಿ, ಸಮುದ್ರದ ಆ ಭಾಗದಲ್ಲಿ ದೊಡ್ಡ ತಿಮಿಂಗಿಲ, ಶಾರ್ಕ್ ಹಾಗೂ ಹಾವುಗಳಿದೆ ಅಂತ!

7 Amazing Shark Experiences Around the Worldಆಕಡೆಗೆ ಹೋದವಳು ಮತ್ತೆ ಬರಲೇ ಇಲ್ಲ! ನಮ್ಮ ಕಥೆ ಇಲ್ಲಿಗೇ ನಿಲ್ಲಿಸೋಣ..

18 of the Most Dangerous Roads in the World | Reader's Digestಜೀವನದಲ್ಲಿ ಏನನ್ನಾದರೂ ಪಡೆಯಬೇಕಂದ್ರೆ ಅದರ ರಸ್ತೆ ಕಷ್ಟದ್ದೇ ಆಗಿರುತ್ತದೆ. ಕಷ್ಟ ಪಟ್ರೆ ಮಾತ್ರ ಸುಖ ಎನ್ನೋ ಥಿಯರಿ ಎಲ್ಲರೂ ನಂಬುವಂಥದ್ದು. ಆದರೆ ಇದು ಎಲ್ಲಾ ಸಮಯದಲ್ಲೂ ಅನ್ವಯಿಸೋದಿಲ್ಲ. ಕಷ್ಟದ ದಾರಿ ಬದಲು ಸುಲಭದ ದಾರಿಯನ್ನೂ ನೀವು ಆರಿಸಬಹುದು, ಯಾಕಂದ್ರೆ ಅದು ಸುಲಭವಾಗಿರುತ್ತದೆ. ಜೀವನದಲ್ಲಿ ಕೆಲವೊಮ್ಮೆ ಸುಲಭದ ದಾರಿ ಆರಿಸೋದು ಕೂಡ ಮುಖ್ಯವಾಗಿರುತ್ತದೆ. ಕಷ್ಟದ ದಾರಿಯನ್ನೇ ಸದಾ ಎದುರಿಸಬೇಕಿಲ್ಲ, ಅದರಲ್ಲೂ ನೀವು ತಯಾರಾಗಿಲ್ಲ ಅಂದ್ರೆ ಕಷ್ಟವನ್ನು ಯಾಕೆ ಎದುರಿಸಬೇಕು? ಅಲ್ವಾ?

How Businesses Can Make the Healthy Choice the Easy Choice for Employees

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!