ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ಉರ್ಫಿ ಜಾವೇದ್ ಅವರು ಸದಾ ಬಟ್ಟೆ ವಿಚಾರಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಉರ್ಫಿ ವಿರುದ್ಧ ದೂರು ದಾಖಲಾಗಿದೆ.
ಇದೀಗ ಈ ಕುರಿತು ಕೆ ಮಾತನಾಡಿದ ಅವರು,ತನಗೆ ಬಟ್ಟೆಯ ಅಲರ್ಜಿ ಇದೆ.ಆದ್ದರಿಂದ ನಾನು ಪೂರ್ತಿ ಬಟ್ಟೆಯನ್ನು ಧರಿಸುವುದಿಲ್ಲ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಇನ್‌ಸ್ಟಾ ಸ್ಟೋರಿಯಲ್ಲಿ ಅಲರ್ಜಿ ಆಗಿರುವ ಫೋಟೊ ಶೇರ್ ಮಾಡಿ, ನಾನು ಬಟ್ಟೆಗಳನ್ನು ಏಕೆ ಧರಿಸುವುದಿಲ್ಲ ಎಂದು ಈಗ ನಿಮಗೆ ತಿಳಿದಿದೆ. ಅಲ್ಲವೆ? ಎಂದು ಪ್ರಶ್ನಿಸಿದ್ದಾರೆ. ನಾನು ಆಗಾಗ ಅರೆ ಬೆತ್ತಲೆ ಆಗುವ ಕಾರಣವಿಷ್ಟೇ ನನಗೆ ಉಣ್ಣೆಯ ಬಟ್ಟೆಗಳನ್ನು ಧರಿಸಿದಾಗ ಈ ರೀತಿ ಅಲರ್ಜಿ ಆಗುತ್ತದೆ. ಪ್ರೂಫ್ ಕೂಡ ನಾನು ಫೋಟೊ ಮೂಲಕ ನಿಮಗೆ ಕೊಡುತ್ತಿದ್ದೇನೆ. ನನ್ನ ದೇಹಕ್ಕೆ ಬಟ್ಟೆ ಅಲರ್ಜಿ ಎಂದು ಹೇಳಿಕೊಂಡಿದ್ದಾರೆ.