MUST READ | ಹಾಕಿದ ಬಟ್ಟೇನೆ ಮತ್ತೆ ಮತ್ತೆ ಹಾಕೋಕೆ ಮುಜುಗರ ಯಾಕೆ? ಬಟ್ಟೆ ರಿಪೀಟ್ ಮಾಡ್ಲೇಬೇಕು..

ಸೆಲೆಬ್ರಿಟಿಗಳು ಹಾಕಿದ ಬಟ್ಟೆಯನ್ನು ಹಾಕೋದಿಲ್ಲ, ಅವರ ಬಳಿ ವರ್ಷವಿಡೀ ಹಾಕುವಷ್ಟು ಬಟ್ಟೆಯಿದೆ ಎಂಬ ಭಾವನೆ ಹಲವರಲ್ಲಿದೆ. ಹೆಚ್ಚಾಗಿ ಟೀನ್ ಏಜ್‌ನಲ್ಲಿ ಇರುವವರಿಗೆ ಬಟ್ಟೆಗಳನ್ನು ರಿಪೀಟ್ ಮಾಡೋಕೆ ಇಷ್ಟ ಇಲ್ಲ, ಒಂದೇ ಬಟ್ಟೆ ಹಾಕಿದ್ರೆ ಸ್ಟೇಟಸ್ ಕಮ್ಮಿ ಆಗುತ್ತದೆ, ರಿಪೀಟ್ ಮಾಡದಷ್ಟು ಬಟ್ಟೆ ನನ್ನ ಬಳಿ ಇರಬೇಕು ಅನ್ನೋ ಮನೋಭಾವ ಅವರದ್ದಾಗಿರುತ್ತದೆ.

ನಟಿ ಆಲಿಯಾ ಭಟ್ ಒಂದು ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡ್ತಾರೆ, ನಾನು ಕೂಡ ಹಾಕಿದ ಬಟ್ಟೆಯನ್ನು ಮತ್ತೆ ಮತ್ತೆ ಹಾಕ್ತೇನೆ. 365 ಜೊತೆ ಬಟ್ಟೆ ನನ್ನ ಹತ್ತಿರ ಇಲ್ಲ. ನಾವು ತಲೆಯಿಲ್ಲದೇ ಸುಮ್ಮನೆ ಬಟ್ಟೆ ಖರೀದಿಸುತ್ತಾ ಹೋದರೆ, ಬೇಡ ಎಂದು ಬಿಸಾಡುವ ಬಟ್ಟೆಗಳು ಎಲ್ಲಿಗೆ ಹೋಗುತ್ತವೆ? ನಮ್ಮ ಪರಿಸರಕ್ಕೆ ಇದರಿಂದ ಎಷ್ಟು ಹಾನಿಯಾಗುತ್ತದೆ ಎನ್ನೋದನ್ನು ಯೋಚಿಸಬೇಕು ಎಂದಿದ್ದಾರೆ.

ಹಾಕಿದ ಬಟ್ಟೆಯನ್ನೇ ಹಾಕಿ ಬಳಸಬೇಕು ಏಕೆ ಗೊತ್ತಾ?

ಅನ್‌ಕಂಫರ್ಟಬಲ್

ನಿಮ್ಮ ಮನಸ್ಸಿಗೆ ಯಾವ ಬಟ್ಟೆ ಹಾಕಿದರೂ ಸಮಾಧಾನ ಇಲ್ಲ. ಸಿಕ್ಕಾಪಟ್ಟೆ ಸೆಲೆಕ್ಷನ್ ಮಾಡಿ ಇಷ್ಟಪಟ್ಟು ಹಾಕಿದ ಬಟ್ಟೆ ಅರ್ಧ ಗಂಟೆಗೆ ಅನ್‌ಕಂಫರ್ಟಬಲ್ ಅನಿಸಬಹುದು. ಇನ್ನೊಬ್ಬರ ಡ್ರೆಸ್ ನೋಡಿ ನನಗೆ ಅದು ಬೇಕು ಎನಿಸಬಹುದು. ಇದನ್ನು ಯೋಚಿಸಿದರೆ ಯಾವುದೋ ಒಂದು ಹಾಕಿದರೆ ಸಾಕು ಎನಿಸುತ್ತದೆ ಅಲ್ವಾ?

How Many Clothes Do I Really Need? - The New York Timesಸಿಕ್ಕಾಪಟ್ಟೆ ದುಡ್ಡು ಉಳಿಯತ್ತೆ
ಯೋಚಿಸಿ, ನೀವು ಒಂದು ವರ್ಷದಲ್ಲಿ ಬಟ್ಟೆಗಳ ಮೇಲೆ ಎಷ್ಟು ಹಣ ಸುರಿದಿದ್ದೀರಿ? ಬಟ್ಟೆಗಳ ಖರೀದಿ ನಿಲ್ಲಿಸಿ, ಅವಶ್ಯಕತೆ ಇದ್ದಾಗ ಮಾತ್ರ ಬಟ್ಟೆ ಖರೀದಿಸಿ.

How to Save Money from Your Monthly Salaryನಿರ್ಧಾರ ಸುಲಭ
ಆಪ್ಷನ್ಸ್ ಇದ್ದಷ್ಟು ಆಯ್ಕೆ ಕಷ್ಟ ಅಲ್ವಾ? ಹತ್ತು ಜೊತೆ ಬಟ್ಟೆಯಲ್ಲಿ ಎರಡು ಜೊತೆ ಆರಿಸೋದು ತುಂಬಾನೇ ಕಷ್ಟ. ನಾಲ್ಕೇ ಜೊತೆ ಇದ್ದರೆ? ಯಾವುದೋ ಒಂದು ಹಾಕಿಕೊಂಡು ಹೋಗುತ್ತೀರಿ.

What to Wear on a First Date? - Making Differentಸಮಯ ಉಳಿಸಿ
ಎಲ್ಲಿಗಾದರೂ ಹೊರಡುವಾಗ ಯಾವ ಬಟ್ಟೆ ಹಾಕಬೇಕು ಎನ್ನುವ ಆಯ್ಕೆ ಮಾಡೋದಕ್ಕೆ ಸಾಕಷ್ಟು ಸಮಯ ಹೋಗುತ್ತದೆ. ಅಷ್ಟೆಲ್ಲಾ ಹುಡುಕಿದರೂ ಕೊನೆಗೆ ಯಾವುದೋ ಒಂದು ಇಷ್ಟದ ಬಟ್ಟೆಯನ್ನೇ ಹಾಕ್ತೀರಿ.

10 Things You Can Start Doing Right Now to Save Time | Inc.comಕಾನ್ಫಿಡೆನ್ಸ್ ಹೆಚ್ಚು
ನಿಮಗೆ ಕಂಫರ್ಟ್ ನೀಡುವ ಬಟ್ಟೆಯಿಂದ ನಿಮ್ಮ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ. ನೋಡೋಕೆ ಚೆನ್ನಾಗಿದೆ ಎಂದು ಸರಿಯಾದ ಕಂಫರ್ಟ್ ಇಲ್ಲದ ಬಟ್ಟೆ ಹಾಕಿ ಕಿರಿಕಿರಿ ಅನುಭವಿಸೋದು ಯಾಕೆ?

14 people share their go-to clothes for a confidence boost | Well+Goodಬಟ್ಟೆ ತೊಳೆಯೋದ್ಯಾರು?
ಅಮ್ಮ ತೊಳಿತಾರೆ ಅಥವಾ ವಾಶಿಂಗ್ ಮಶೀನ್ ತೊಳೆಯತ್ತೆ ಎಂದು ಹೇಳಬೇಡಿ, ಮಶೀನ್‌ಗೆ ಪೌಡರ್, ಲಿಕ್ವಿಡ್, ಕರೆಂಟ್, ನೀರು ಎಲ್ಲವೂ ಕೊಡೋದು ನೀವೆ. ಸುಮ್ಮನೆ ಹಣ ವೇಸ್ಟ್ ಅಲ್ವಾ?

16,000+ Washing Clothes Picturesನಿಮ್ಮ ಬಟ್ಟೆ ಎಲ್ಲಿಗೆ ಹೋಗ್ತಿದೆ?
ನೀವು ಖರೀದಿಸಿದ ಬಟ್ಟೆ, ನಿಮಗೆ ಇಷ್ಟವಾಗದ್ದು ಇನ್ನೊಬ್ಬರಿಗೆ ನೀಡ್ತೀರಿ. ಅವರು ಇನ್ಯಾರಿಗೋ ನೀಡ್ತಾರೆ, ಕೊನೆಗೆ ಅದು ಮಸಿಬಟ್ಟೆ ಆಗುತ್ತದೆ. ಅಲ್ಲಿಂದ ಕಸದ ಬುಟ್ಟಿ ಸೇರಿತ್ತದೆ. ಇದಾದ ನಂತರ ಬಟ್ಟೆ ಏನಾಗುತ್ತದೆ? ಇದರಿಂದ ಪರಿಸರಕ್ಕೆ ಏನು ಹಾನಿ? ಆಲೋಚಿಸಿ..

A Highsnobiety Guide to Caring for Your Clothes

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!