ನೀವೇನು ದೇಶದ ವಿರುದ್ಧ ಯುದ್ಧ ಮಾಡಲು ಹೊರಟಿದ್ದೀರಾ?: ರೈತ ನಾಯಕರಿಗೆ ಚಾಟಿ ಬೀಸಿದ ಹೈಕೋರ್ಟ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಚಂಡೀಗಢದ ಹೈಕೋರ್ಟ್‌ನಲ್ಲಿ ಗುರುವಾರ ವಿಚಾರಣೆ ನಡೆದ್ದಿದ್ದು, ಈ ವೇಳೆ ಹೈಕೋರ್ಟ್ ಛೀಮಾರಿ ಹಾಕಿದೆ .

ವಿಚಾರಣೆಯ ಸಮಯದಲ್ಲಿ, ಹರ್ಯಾಣ ಸರ್ಕಾರವು ಹೈಕೋರ್ಟ್‌ಗೆ ರೈತ ಪ್ರತಿಭಟನೆಯ ಹಲವು ಫೋಟೋಗಳನ್ನು ನೀಡಿಡಿದ್ದು, ಇದನ್ನು ಕಂಡು ರೈತ ನಾಯಕರ ಮೇಲೂ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಪೀಠ , ಕೈಯಲ್ಲಿ ಖಡ್ಗಗಳನ್ನು ಹಿಡಿದು ಯಾವ ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದಾರೆ? ಎಂದು ಪ್ರಶ್ನೆ ಮಾಡಿದೆ.

ರೈತರು ಶಾಂತಿಯುತಯಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ರೈತರ ಪರ ವಕೀಲರು ಹೇಳಿದಾಗ, ಕೈಯಲ್ಲಿ ಖಡ್ಗಗಳನ್ನು ಹಿಡಿದು ಯಾವ ರೀತಿಯ ಶಾಂತಿಯುತ ಪ್ರತಿಭಟನೆ ಎಂದು ಪ್ರಶ್ನಿಸಿದೆ.

ಈ ವೇಳೆ ಹರಿಯಾಣ ಹಾಗೂ ಪಂಜಾಬ್‌ ಸರ್ಕಾರಗಳನ್ನೂ ತರಾಟೆಗೆ ತೆಗೆದುಕೊಂಡ ಕೋರ್ಟ್‌, ಎರಡೂ ರಾಜ್ಯ ಸರ್ಕಾರಗಳು ಈ ವಿಚಾರದಲ್ಲಿ ತಮ್ಮ ಜವಾಬ್ದಾರಿಯನ್ನು ಮರೆತಂತೆ ವರ್ತನೆ ಮಾಡಿವೆ. ತಮ್ಮ ಜವಾಬ್ದಾರಿಯನ್ನು ನಿರ್ವಹಿಸಲು ಈ ಸರ್ಕಾರಗಳು ವಿಫಲವಾಗಿದೆ ಎಂದು ಹೇಳಿದೆ.

ಹರಿಯಾಣ ಸರ್ಕಾರ, ರೈತ ಪ್ರತಿಭಟನೆಯಲ್ಲಿ ಭಾಗಿಯಾದ ಕೆಲವು ವ್ಯಕ್ತಿಗಳ ಫೋಟೋಗಳನ್ಜು ನ್ಯಾಯಾಲಯಕ್ಕೆ ಸಲ್ಲಿಸಿತ್ತು. ಈ ಚಿತ್ರಗಳನ್ನು ನೋಡಿದ ನ್ಯಾಯಾಲಯ ರೈತ ಚಳವಳಿಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಮುಂದಿಟ್ಟುಕೊಂಡು ನೀವು ಹೋರಾಟ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನೀವೆಲ್ಲಾ ಯಾವ ರೀತಿಯ ಪೋಷಕರು ಎನ್ನುವುದೇ ಅರ್ಥವಾಗುತ್ತಿಲ್ಲ. ಮಕ್ಕಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದೀರಲ್ಲ. ನಿಮಗೆ ನಾಚಿಕೆ ಆಗೋದಿಲ್ಲವೇ. ಅದಲ್ಲದೆ, ಆಯುಧಗಳನ್ನು ಹಿಡಿದು ಪ್ರತಿಭಟನೆ ಮಾಡುತ್ತಿರುವ ನಿಮಗೆ ಇಲ್ಲಿ ನಿಲ್ಲುವ ಹಕ್ಕು ಕೂಡ ಇಲ್ಲ. ನೀವೇನು ದೇಶದ ವಿರುದ್ಧ ಯುದ್ಧ ಮಾಡಲು ಹೊರಟಿದ್ದೀರಾ? ಇದು ಪಂಜಾಬ್‌ನ ಸಂಸ್ಕೃತಿಯಲ್ಲ. ನಿಮ್ಮ ನಾಯಕರನ್ನು ಬಂಧಿಸಿ ಮೊದಲು ಚೆನ್ನೈಗೆ ಕಳಿಸಬೇಕು. . ನೀವು ಅಮಾಯಕರನ್ನು ಮುಂದಿಟ್ಟು ಹೋರಾಟ ಮಾಡುತ್ತಿದ್ದೀರಿ ಎಂದು ನ್ಯಾಯಾಲಯ, ಇದೊಂದು ಅವಮಾನಕ ಸಂಗತಿ ಎಂದಿದೆ.

ಪ್ರತಿಭಟನೆಯ ವೇಳೆ ಸಾವಿಗೀಡಾದ ರೈತ ಶುಭಕರನ್‌ ಸಾವನ್ನು ನಿವೃತ್ತ ಹೈಕೋರ್ಟ್‌ ನ್ಯಾಯಮೂರ್ತಿ ನೇತೃತ್ವದ ಸಮಿತಿ ತನಿಖೆ ಮಾಡಲಿದೆ. ಇದಕ್ಕಾಗಿ 3 ಸದಸ್ಯರ ಸಮಿತಿಯನ್ನು ರಚನೆ ಮಾಡಲಾಗುತ್ತದೆ ಎಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!