ಸಿದ್ದರಾಮಯ್ಯ ಹಗಲು ಸುಳ್ಳು ಹೇಳುವ ರಾಜ್ಯದ ನಂ.1 ಸುಳ್ಳುಗಾರ: ಎನ್.ರವಿಕುಮಾರ್ ಟೀಕೆ

ಹೊಸದಿಗಂತ ವರದಿ, ರಾಯಚೂರು:

ರಾಜ್ಯಕ್ಕೆ ನ್ಯಾಯ ಸಮ್ಮತವಾಗಿ ದೊರೆಯಬೇಕಾದ ಜಿಎಸ್‌ಟಿ ಪಾಲನ್ನು ಕೇಂದ್ರ ಸರ್ಕಾರ ನೀಡಿದ್ದರೂ ಸಹ ನೀಡಿಲ್ಲ ಎನ್ನುವ ಸಿದ್ದರಾಮಯ್ಯ ಅವರು ಹಗಲು ಸುಳ್ಳು ಹೇಳುವ ಸುಳ್ಳುಗಾರ ಅಲ್ಲದೆ ರಾಜ್ಯದ ನಂ-೧ ಸುಳ್ಳುಗಾರ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್.ರವಿಕುಮಾರ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು.

ಗುರುವಾರ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಮಂತ್ರಿಗಳಾದ ಬಳಿಕ ಹಿಂದೆ ಇದ್ದ ಜಿಎಸ್‌ಟಿ ಪ್ರಮಾಣವನ್ನು ಶೇ. ೪೨ಕ್ಕೆ ಏರಿಕೆ ಮಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ೨೦೦೦ ರಿಂದ ೨೦೦೪ರ ವರೆಗೆ ಶೇ.೨೯.೫, ೨೦೦೫-೧೫ರ ವರಗೆ ಶೇ.೩೨ ಬರುತ್ತಿತ್ತು ಆದರೆನರೇಂದ್ರ ಮೋದಿಯವರು ಪಿಎಂ ಆದ ನಂತರದಲ್ಲಿ ಶೇ.೪೨ಕ್ಕೇ ಏರಿಕೆ ಮಾಡಿದರು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾದ ನಂತರದಲ್ಲಿ ಶೇ.೪೧ ರಷ್ಟು ನೀಡುತ್ತಿದ್ದಾರೆ ಎಂದರು.

ನರೇಂದ್ರ ಮೋದಿಯವರು ಪಿಎಂ ಆದ ನಂತರದಲ್ಲಿ ೨೦೧೪ ರಿಂದ ೨೦೨೪ರ ವರೆಗೆ ೨೮೫೪೫೨ ಕೋಟಿ ರೂಗಳನ್ನು ನೀಡುವ ಮೂಲಕ ಈ ಹಿಂದೆ ಇದ್ದ ಪ್ರಮಾಣದಲ್ಲಿ ಶೇ.೨೪೬ ರಷ್ಟು ಹೆಚ್ಚಳವನ್ನು ಮಾಡಿದ್ದಾರೆ. ಆದರೆ ಮನಮೋಹನ್ ಸಿಂಗ್ ಪಿಎಂ ಆಗಿದ್ದ ಸಂದರ್ಭದಲ್ಲಿ ಕೇವಲ ೮೧೭೮೫ ಕೋಟಿ ಮಾತ್ರ ರಾಜ್ಯಕ್ಕೆ ಬಂದಿತ್ತು ಎನ್ನುವುದನ್ನು ಕಾಂಗ್ರೆಸ್ಸಿಗರು ಹೇಳುವುದೇ ಇಲ್ಲ. ಅದನ್ನು ಮರೆಮಾಚುವುದ್ಯಾಕೆ ಎಂದು ಪ್ರಶ್ನಿಸಿದರಲ್ಲದೆ ಕೇಂದ್ರ ಸರ್ಕಾರ ಹೊರಡಿಸಿರುವ ಶ್ವೇತ ಪತ್ರವನ್ನು ಇಟ್ಟುಕೊಂಡು ಆರ್ಥಿ ತಜ್ಞರೊಂದಿಗೆ ಕಾಂಗ್ರೆಸ್ ಬಹಿರಂಗ ವೇದಿಕೆಯಲ್ಲಿ ಚರ್ಚೆಗೆ ಬರುವಂತೆ ಅವರು ಪಂತಾಹ್ವಾನವನ್ನು ನೀಡಿದರು.

ರಾಜ್ಯಕ್ಕೆ ಜಿಎಸ್‌ಟಿಯಲ್ಲಿ ಅನ್ಯಾಯವಾಗಿದೆ ಎಂದು ಹೇಳುವ ಸಿದ್ದರಾಮಯ್ಯ ಅವರು ಇವರೆಗೆ ಜರುಗಿದ ಜಿಎಸ್‌ಟಿ ಸಭೆಗಳಲ್ಲಿ ಒಂದೇ ಒಂದು ಸಭೆಗೆ ಹಾಜರಾಗಿದ್ದಾರೆ. ಅನ್ಯಾಯವಾಗಿದ್ದರೆ ಸಭೆಗೆ ಹಾಜರಾಗಿ ಅಲ್ಲಿ ನ್ಯಾಯವನ್ನು ಕೇಳಬೇಕಾಗಿತ್ತು. ಹಾಗೊಂದುವೇಳೆ ಕೇಂದ್ರ ಅನ್ಯಾಯವನ್ನೇ ಮಾಡಿದ್ದರೆ ಸುಪ್ರೀಂ ಕೋರ್ಟ್ಗೆ ದೂರನ್ನು ನೀಡಲಿ ಅಲ್ಲಿ ಯಾವುದು ಸತ್ಯ ಎನ್ನುವುದು ತಿಳಿಯುತ್ತದೆ. ಕೇಂದ್ರ ಸರ್ಕಾರ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ೨೭೮೮೫೪ ಕೋಟಿ ಅನುದಾನ, ರಸ್ತೆಗಳ ಅಭಿವೃದ್ಧಿಗೆ ೯೭೨೪೬ ಕೋಟಿ ಮತ್ತು ೪೫೦೦ ಕೋಟಿ ರೂಗಳನ್ನು ನೀಡಿದೆ ಎಂದು ಹೇಳಿದರು.

ಅವರಿಗೆ ಕುಟುಂಬವೇ ಇಲ್ಲ ಎನ್ನುವ ಲಾಲೂಪ್ರಸಾದ್ ಯಾದವ್ ಅವರ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ೧೪೦ ಕೋಟಿ ಜನತೆ ನನ್ನ ಕುಟುಂಬ ಇದ್ದಹಾಗೆ ಎಂದು ಹೇಳಿದ್ದಾರೆ. ಈ ಚುನಾವಣೆಯಲ್ಲಿ ಇದೇ ನಮ್ಮ ಮುಖ್ಯ ಧ್ಯೇಯ ವಾಕ್ಯವಾಗಿದೆ ಎಂದರು.

ತಮಿಳುನಾಡಿನ ಎ.ರಾಜಾ ಎನ್ನುವ ಸಂಸದ ದೇಶ ವಿಭಜನೆಯ ಬೀಜ ಇದ್ದ ಹಾಗೆ. ತಮಿಳುನಾಡಿನಲ್ಲಿ ಹಿಂದೂ ಧರ್ಮವನ್ನು ವಿರೋಧಿಸುವ ಸರ್ಕಾರವಿದೆ. ಇದರಿಂದಲೇ ನಾಲ್ಕು ದಶಕಗಳ ಕಾಲ ರಾಜ್ಯವನ್ನು ಆಳಲಾಗಿದೆ. ಮುಖ್ಯಮಂತ್ರಿ ಸ್ಟಾಲಿನ್ ಪುತ್ರನೂ ಇದೇ ರೀತಿಯ ವರ್ತೆಯನ್ನು ಮಾಡಿದ್ದಾರೆ. ಈ ಸರ್ಕಾರಕ್ಕೆ ಈಗ ಅಧಿಕಾರ ಪತನವಾಗುವ ಭೀತಿ ಉಂಟಾಗಿರುವುದರಿoದ ಬುದ್ಧಿ ಭ್ರಮಣೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎ.ಪಾಪಾರಡ್ಡಿ,ರವೀಂದ್ರ ಜಲ್ದಾರ, ಶಂಕರ ರಡ್ಡಿ, ರಘು, ರಾಘವೇಂದ್ರ, ಗಿರೀಶ ಸೇರಿದಂತೆ ಅನೇಕರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!