ನೀವು ಪ್ರಾಮಾಣಿಕರಾಗಿದ್ದರೆ ಕೇಳುತ್ತಿರುವ ಪ್ರಶ್ನೆಗಳಿಗೆ ಏಕೆ ಉತ್ತರ ನೀಡುತ್ತಿಲ್ಲ?: ಸಿಸೋಡಿಯಾ, ಕವಿತಾ, ತೇಜಸ್ವಿಗೆ ಬಿಜೆಪಿ ತಿರುಗೇಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್ ‌:

ಭ್ರಷ್ಟಾಚಾರದಲ್ಲಿ ತೊಡಗಿರುವ ಪ್ರಾದೇಶಿಕ ರಾಜಕೀಯ ಪಕ್ಷಗಳು ತನಿಖೆ ಎದುರಿಸುತ್ತಿರುವ ಭಾವನಾತ್ಮಕ ಕಾರ್ಡ್ ಅನ್ನು ಆಡುತ್ತಿವೆ ಎಂದು ಬಿಜೆಪಿ (BJP) ಶನಿವಾರ ಹೇಳಿದೆ.

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia) ಜೈಲಿನಲ್ಲಿದ್ದು, ಕೆ ಕವಿತಾ ಅವರನ್ನು ಇಡಿ ವಿಚಾರಣೆ ನಡೆಸುತ್ತಿದೆ.ಜೊತೆಗೆ ಉದ್ಯೋಗಕ್ಕಾಗಿ ಭೂಮಿ ಪ್ರಕರಣದಲ್ಲಿ ಬಿಹಾರದ ತೇಜಸ್ವಿ ಯಾದವ್​​ಗೆ ಸಮನ್ಸ್ ನೀಡಲಾಗಿದೆ. ಹೀಗಾಗಿ ಈ ಕುರಿತು ಮಾತನಾಡಿದ ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ , ಆರೋಪಗಳನ್ನು ನಿರಾಕರಿಸುವುದಿಲ್ಲ, ವಿಚಾರಣೆಗೆ ಸಹಾಯ ಮಾಡುತ್ತಿಲ್ಲ ಎಂದರು.

ಸಿಸೋಡಿಯಾ ಅವರ ಕಸ್ಟೋಡಿಯನ್ ವಿಚಾರಣೆ ಅಗತ್ಯ ಎಂದು ನ್ಯಾಯಾಲಯ ಹೇಳಿದೆ. ಇದು ಇಡಿಗೆ ಪೂರಕವಾಗಿ ಮಾಡಿದ್ದಲ್ಲ. ರಾಜಕೀಯ ಪೈಪೋಟಿಯೂ ಇಲ್ಲ. ಇಷ್ಟು ಪ್ರಾಮಾಣಿಕರಾಗಿದ್ದರೆ ಮನೀಶ್ ಸಿಸೋಡಿಯಾ ಅವರು ಕೇಳುತ್ತಿರುವ ಪ್ರಶ್ನೆಗಳಿಗೆ ಏಕೆ ಉತ್ತರ ನೀಡುತ್ತಿಲ್ಲ? ಅವರು ಈ ಎಲ್ಲದರಲ್ಲೂ ಭಾಗಿಯಾಗಿಲ್ಲ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಹೇಳಬೇಕಿತ್ತು. ಅವರು ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ, ತನಿಖೆಗೆ ಸಹಕರಿಸುತ್ತಿಲ್ಲ ಎಂದು ನ್ಯಾಯಾಲಯ ಹೇಳಿದೆ ಎಂದಿದ್ದಾರೆ.

ಇನ್ನು ನಿತೀಶ್ ಕುಮಾರ್ ಕೂಡ ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಹೇಳಿದ್ದಾರೆಈಗ ತನಿಖೆ ನಡೆಯುತ್ತಿದ್ದರೂ ನೀವು ಯಾಕೆ ಮಾತನಾಡುತ್ತಿಲ್ಲ? ಎಲ್ಲವೂ ರಾಜಕೀಯ ಪೈಪೋಟಿ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ನ್ಯಾಯಾಲಯದಿಂದ ನಿಮಗೆ ಏಕೆ ಕಾಲಾವಕಾಶ ಸಿಗುತ್ತಿಲ್ಲ? ಭಾಟಿಯಾ ಕೇಳಿದ್ದಾರೆ.

ಬಿಆರ್‌ಎಸ್ ನಾಯಕಿ ಕೆ.ಕವಿತಾ ಅವರನ್ನು ಬುಚ್ಚಿಬಾಬು ಜೊತೆಗಿನ ಸಂಪರ್ಕದ ಬಗ್ಗೆ ಕೇಳಲಾಯಿತು. ಅವರು ಯಾವುದೇ ಉತ್ತರ ನೀಡಲಿಲ್ಲ. ಮದ್ಯದ ಹಗರಣದ ಕಿಂಗ್‌ಪಿನ್ ಅರವಿಂದ್ ಕೇಜ್ರಿವಾಲ್. ಕವಿತಾಜಿ, ಇಂಡೋಸ್ಪಿರಿಟ್ಸ್‌ಗೂ ಬುಚ್ಚಿಬಾಬು ಅವರಿಗೂ ಏನು ಸಂಬಂಧ ಎಂದು ಸಾರ್ವಜನಿಕರಿಗೆ ತಿಳಿಸಬೇಕು ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!