ಪ್ರತಿ ಬಾರಿ ಇಡಿ ದಾಳಿ ನಡೆದಾಗಲೂ ಪ್ರಧಾನಿ ಮೋದಿಯನ್ನು ದೂರೋದೇಕೆ? ಗುಡುಗಿದ ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭ್ರಷ್ಟಾಚಾರದ ಪಿಡುಗನ್ನು ಉನ್ನತ ಮಟ್ಟದಲ್ಲಿ ತಡೆಯಲು ಜಾರಿ ನಿರ್ದೇಶನಾಲಯದಿಂದ ದಾಳಿಗಳು ನಡೆದಿವೆ, ಪ್ರತಿ ಬಾರಿ ಇಡಿ ದಾಳಿ ನಡೆಸಿದಾಗಲೆಲ್ಲ ಪ್ರಧಾನಿ ಮೋದಿ ಅವರನ್ನು ದೂರುವುದು ಏಕೆ? ಸದುದ್ದೇಶದಿಂದ ಕೂಡಿದ ಕಾರ್ಯಕ್ಕೆ ಶ್ಲಾಘನೆ ಮಾಡುವ ಬದಲು ಪ್ರಧಾನಿ ಮೋದಿಯನ್ನೇಕೆ ದೂರುತ್ತೀರಿ ಎಂದು ಕೇಂದ್ರ ಸಚಿವ ಅಮಿತ್ ಶಾ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಭ್ರಷ್ಟಾಚಾರ ಕೊನೆಗಾಣಿಸುವುದು ಕೇಂದ್ರದ ಧ್ಯೇಯ, ಸರ್ಕಾರದಿಂದ ಆಗುತ್ತಿರುವ ಈ ಕೆಲಸ ವಿಪಕ್ಷ ನಾಯಕರಿಗೆ ಇಷ್ಟವಾಗುತ್ತಿಲ್ಲ, ಇಡಿ ದಾಳಿಯಾಗುತ್ತಿದ್ದಂತೆ ಪ್ರಧಾನಿ ಮೋದಿಯನ್ನು ದೂರುತ್ತಾರೆ. ಎಲ್ಲ ಭ್ರಷ್ಟಚಾರ ತೊಲಗಿದೆ ಎಂದು ಹೇಳೋಕೆ ಆಗೋದಿಲ್ಲ, ಆದರೆ ಪ್ರಧಾನಿ ಮೋದಿ ತಂತ್ರಜ್ಞಾನ ಬಳಸಿ ವಿವಿಧ ಹಂತಗಳಲ್ಲಿ ಭ್ರಷ್ಟಾಚಾರವನ್ನು ಕಡಿಮೆ ಮಾಡಿದ್ದಾರೆ ಎಂದಿದ್ದಾರೆ.

ಬೇರೆ ಪಕ್ಷಗಳಿಗೆ ನಮ್ಮನ್ನು ಹೋಲಿಕೆ ಮಾಡಿ ನೋಡಿ, ಎಲ್ಲಿ ಉತ್ತಮ ಯೋಜನೆಗಳು ಸಿಕ್ಕಿವೆ, ಜನಪರ ಕಾರ್ಯಗಳಾಗಿವೆ? ಬರೀ ವ್ಯಕ್ತಿಯನ್ನು ನೋಡಿ ವೋಟ್ ಹಾಕಬೇಡಿ, ವ್ಯಕ್ತಿ ಜೊತೆ ಪಕ್ಷವೂ ಮುಖ್ಯ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!