Tuesday, March 28, 2023

Latest Posts

ಬಾಲಿವುಡ್ ನವದಂಪತಿ ಸಿದ್ದಾರ್ಥ್-ಕಿಯಾರಾ ಬಳಿ ರಾಮ್ ಚರಣ್ ಪತ್ನಿ ಉಪಾಸನಾ ಕ್ಷಮೆ ಕೇಳಿದ್ಯಾಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ಜೋಡಿ ಸಿದ್ದಾರ್ಥ್ ಮಲ್ಹೋತ್ರ (Siddharth Malhotra) ಹಾಗೂ ಕಿಯಾರಾ ಅಡ್ವಾಣಿ ಅವರು ಅದ್ದೂರಿಯಾಗಿ ಮದುವೆಯಾಗಿದ್ದಾರೆ.

ಈ ಮದುವೆಗೆ ಬಾಲಿವುಡ್​ನಿಂದ ಅನೇಕ ಸೆಲೆಬ್ರಿಟಿಗಳು ಆಗಮಿಸಿ ನವಜೋಡಿಗೆ ಶುಭಹಾರೈಸಿದ್ರು.
ಫೆ.7ರ ರಾತ್ರಿ ವೇಳೆಗೆ ಈ ದಂಪತಿ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ.

ಆದ್ರೆ ಟಾಲಿವುಡ್ ನಟ ರಾಮ್​ ಚರಣ್ (Ram Charan) ಪತ್ನಿ ಉಪಾಸನಾ ಕೊನಿಡೆಲಾ ಅವರು ನವದಂಪತಿ ಬಳಿ ಕ್ಷಮೆ ಕೇಳಿದ್ದಾರೆ.

‘ಅಭಿನಂದನೆಗಳು. ಸುಂದರವಾಗಿ ಕಾಣುತ್ತಿದ್ದೀರಿ. ಕ್ಷಮಿಸಿ ನಾವು ಮದುವೆಗೆ ಬರೋಕೆ ಸಾಧ್ಯವಾಗಿಲ್ಲ’ ಎಂದು ಉಪಾಸನಾ ಕಮೆಂಟ್ ಮಾಡಿದ್ದಾರೆ.

ಆಲಿಯಾ ಭಟ್, ಕತ್ರಿನಾ ಕೈಫ್​, ವಿಕ್ಕಿ ಕೌಶಲ್ ಸೇರಿ ಅನೇಕ ಸೆಲೆಬ್ರಿಟಿಗಳು ದಂಪತಿಗೆ ಶುಭಾಶಯ ಕೋರಿದ್ದಾರೆ.
ಅನೇಕರು ಸಿದ್ದಾರ್ಥ್-ಕಿಯಾರಾ ಜೋಡಿಯನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಇವರ ಉಡುಗೆ ಬಗ್ಗೆ ಪ್ರಶಂಸೆ ಹೊರಹಾಕಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!