PARENTING | ಹೊಸಬರನ್ನು ಕಂಡರೇಕೆ ಮಕ್ಕಳು ಅಳೋಕೆ ಶುರು ಮಾಡ್ತಾರೆ?

ನಿಮ್ಮ ಜೊತೆ ಕಿಲಕಿಲನೆ ನಗುತ್ತಾ ಆಟ ಆಡೋ ಮಕ್ಕಳಿಗೆ ಸಡನ್ ಆಗಿ ಮನೆಗೆ ಯಾರಾದರೂ ಬಂದ್ರೆ ಭಯವೋ ಭಯ. ಅದರಲ್ಲಿಯೂ ಆ ವ್ಯಕ್ತ ಬಾ ಪುಟ್ಟ ಎಂದು ಮಕ್ಕಳ ಕಣ್ಣಲ್ಲಿ ಕಣ್ಣಿಟ್ಟು ಮಾತಾಡ್ಸಿದ್ರೆ ಮುಗಿದೇ ಹೋಯ್ತು. ಜೋರಾಗಿ ಅಳುತ್ತಾ ರಂಪ ಮಾಡಿ ಬಿಡ್ತಾರೆ?

Stranger Anxiety in Kids: Psychology and 10 Ways to Helpಮಕ್ಕಳಿಗೇಕೆ ಹೊಸಬರನ್ನು ನೋಡಿದ್ರೆ ಹೆದರಿಕೆ ಆಗುತ್ತದೆ?
ಮಗು ಹುಟ್ಟಿದ ಮೊದಲ ಐದು ತಿಂಗಳಲ್ಲಿ ಯಾರು ಮಗುವನ್ನು ಎತ್ತಿಕೊಂಡರೂ ಅವರ ಬಳಿ ಹೋಗುತ್ತಾರೆ. ಆದರೆ ಆರು ತಿಂಗಳ ನಂತರ ತನ್ನವರು ಯಾರು ಅನ್ನೋದನ್ನು ಮಕ್ಕಳು ಗುರುತಿಸೋಕೆ ಆರಂಭಿಸ್ತಾರೆ.

Common Toddler Fears: Doctors, Loud Noises, Dogs and Moreಸದಾ ಮನೆಯಲ್ಲಿಯೇ ಇರುವ ಅಪ್ಪ, ಅಮ್ಮ, ಅಜ್ಜಿ, ತಾತ ಮಾತ್ರ ತನ್ನವರು ಎಂದು ಮಕ್ಕಳು ಫಿಕ್ಸ್ ಆಗ್ತಾರೆ. ಪದೇ ಪದೆ ಮುಖ ನೋಡಿದವರನ್ನು ಮಾತ್ರ ಪರಿಚಯದವರು ಎಂದು ಗುರುತಿಸ್ತಾರೆ. ಅದರಲ್ಲಿಯೂ ಮನೆಯವರ ಜೊತೆ ಇದ್ದಾಗ ಮಾತ್ರ ನಾನು ಸೇಫ್ ಅನ್ನೋದು ಅವರ ಭಾವನೆ.

5 tips to ease your baby's stranger anxiety | Loveveryನಿಮ್ಮ ಮುಖ, ಧ್ವನಿ ಅವರಿಗೆ ಪರಿಚಯ ಇದೆ, ಇನ್ಯಾರದ್ದೂ ಇಲ್ಲ. ಸ್ಟ್ರೇಂಜರ‍್ಸ್‌ನಿಂದ ನನಗೆ ತೊಂದರೆಯಾಗುತ್ತದೆ ಎನ್ನುವುದು ಅವರ ಭಾವನೆ, ಹಾಗಾಗಿ ಭಯದಿಂದ ಜೋರಾಗಿ ಅಳುತ್ತಾರೆ. ಅತ್ತರೆ ನಮ್ಮ ಕಡೆ ಗಮನ ಕೊಡ್ತಾರೆ ಅನ್ನೋದನ್ನೂ ಅವರು ಕಲಿತಿರುತ್ತಾರೆ.

What's behind your toddler's separation anxiety? | Loveveryಮನೆಗೆ ಬಂದವರು ನಿಮಗೆ ಆತ್ಮೀಯರಿರಬಹುದು, ಆದರೆ ಮಕ್ಕಳಿಗಲ್ಲ. ಎರಡು ವರ್ಷದ ಆಸುಪಾಸಿನಲ್ಲಿ ಈ ಭಯ ಹೋಗುತ್ತದೆ. ಬೇರೆಯವರ ಜೊತೆಗೂ ಸುಲಭವಾಗಿ ಬೆರೆಯುತ್ತಾರೆ. ಇದು ಆಗದೇ ಹೋದರೆ ವೈದ್ಯರನ್ನು ಸಂಪರ್ಕಿಸಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!