Thursday, September 29, 2022

Latest Posts

‘ಗುಟ್ಕಾ ಜಾಹೀರಾತಿಗೆ ಅಷ್ಟೊಂದು ಸಂಭಾವನೆ ಸಿಗುವಾಗ ಸಿನಿಮಾಗಳಲ್ಲಿ ಯಾಕೆ ಕೆಲಸ ಮಾಡ್ತಾರೆ?’

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಿರ್ದೇಶಕ ಪ್ರಕಾಶ್ ಝಾ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ ಹೀರೋಗಳ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಗುಟ್ಕಾ ಜಾಹೀರಾತಿನಲ್ಲಿ ಅಜಯ್ ದೇವಗನ್, ಶಾರುಖ್ ಖಾನ್ ಹಾಗೂ ಅಕ್ಷಯ್ ಕುಮಾರ್ ಕಾಣಿಸಿಕೊಂಡಿದ್ದರು. ಟೀಕೆಗಳಿಗೆ ಅಕ್ಷಯ್ ಕುಮಾರ್ ಹಿಂದೆ ಸರಿದಿದ್ದಾರೆ. ಆದರೆ ಇನ್ನುಳಿದ ನಟರು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ.

ನಿರ್ದೇಶಕ ಪ್ರಕಾಶ್ ಈ ಬಗ್ಗೆ ಮಾತನಾಡಿದ್ದು, ಹಲವಾರು ಫ್ಲಾಪ್ ಸಿನಿಮಾಗಳನ್ನು ಕೊಟ್ಟ ನಂತರವೂ ಹೀರೋಗಳು ಹಾಯಾಗಿದ್ದಾರೆ. ಕಾರಣ ಜಾಹೀರಾತುಗಳು, ಸಿನಿಮಾಗೆ ಪಡೆಯುವ ಸಂಭಾವನೆಯಲ್ಲಿ ನಾಲ್ಕು ಪಟ್ಟು ಹೆಚ್ಚು ಸಂಭಾವನೆ ಜಾಹೀರಾತುಗಳಲ್ಲಿ ಪಡೆಯುತ್ತಾರೆ ಎಂದಿದ್ದಾರೆ.

ಈ ಹಿಂದೆ ಹೀರೋಗಳು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದರು, ಕೆಟ್ಟ ಸಿನಿಮಾ ಒಳ್ಳೆ ಸಿನಿಮಾ ಎಂದೆಲ್ಲಾ ನೋಡುತ್ತಿರಲಿಲ್ಲ. ಪ್ಯಾಷನ್‌ಗಾಗಿ ಕೆಲಸ ಮಾಡುತ್ತಿದ್ದರು. ಆದರೆ ಈಗ ಎಲ್ಲವೂ ಹಣಕ್ಕಾಗಿ, ಫ್ಲಾಪ್ ಸಿನಿಮಾ ನಾಯಕ 12 ಜಾಹೀರಾತು ಒಪ್ಪಿಕೊಂಡಿರುತ್ತಾರೆ. ಸಿನಿಮಾ ಮಾಡಿಲ್ಲ ಎಂದರೆ ಏನಾಯ್ತು ಇನ್‌ಕಂ ಚೆನ್ನಾಗಿಯೇ ಇರುತ್ತದೆ. ಗುಟ್ಕಾ ಜಾಹೀರಾತು ಮಾಡುವ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿಲ್ಲ, ಜನರಿಗೆ ಇದರಿಂದ ಯಾವ ರೀತಿ ಸಂದೇಶ ಹೋಗುತ್ತಿದೆ ಎನ್ನುವುದು ಇವರಿಗೆ ಬೇಕಿಲ್ಲ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!