ಮನೆಯಲ್ಲಿ ತಲೆಸ್ನಾನ ಮಾಡಿ ಕೂದಲು ಬಿಟ್ಟುಕೊಂಡು ಓಡಾಡಿದ್ರೆ ಹಿರಿಯರ ಬಳಿ ಬೈಗುಳ. ಮೊದಲು ಕೂದಲು ಕಟ್ಟು ಎಂದು ಗದರುತ್ತಾರೆ. ಆದರೆ ಇದು ಯಾಕೆ?
ಕೂದಲು ಬಿಟ್ಟಿದ್ದರೆ ನಕಾರಾತ್ಮಕ ಶಕ್ತಿಗಳಿಗೆ ಆಹ್ವಾನ ಮಾಡಿದಂತೆ ಆಗುತ್ತದೆ ಎನ್ನುವುದು ದೊಡ್ಡವರ ನಂಬಿಕೆ. ಅಲ್ಲದೆ ಕೂದಲು ಬಿಟ್ಟು ಓಡಾಡುವುದರಿಂದ ಮನೆಯಲ್ಲಿ ಎಲ್ಲಿ ಬೇಕಲ್ಲಿ ಕೂದಲು ಉದುರುತ್ತದೆ. ಇದು ಆಹಾರದಲ್ಲೂ ಸೇರಬಹುದು. ಇನ್ನು ಸಣ್ಣವಾದ, ತೆಳ್ಳನೆ ಕೂದಲಿನವರಿಗೂ ಬೇಸರವಾಗುತ್ತದೆ ಎನ್ನುವ ಕಾರಣ ಇದೆ.