ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿಕೆ ಶಿವಕುಮಾರ್ ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಿ? ಮುಂದಿನ ಐದು ವರ್ಷದ ಅವಧಿಗೆ ಮುಖ್ಯಮಂತ್ರಿ ಆಗಿ ಎಂದು ಸಚಿವ ಕೆ.ಎನ್ ರಾಜಣ್ಣ (KN Rajanna) ಸಲಹೆ ನೀಡಿದ್ದಾರೆ.
ಡಿಕೆಶಿ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗ್ತಾರೆ ಎಂಬ ಎಸ್.ಟಿ.ಸೋಮಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ ಮಾತನಾಡಿದ ಅವರು, ಸಿಎಂ ಆಗೇ ಬಿಡುತ್ತಾರೆ ಅಂತನೂ ಹೇಳಿಲ್ಲ. ಆಗಲ್ಲ ಅಂತಾನೂ ಹೇಳಿಲ್ಲ. ಅವರ ಹಣೆಯಲ್ಲಿ ಬರೆದಿದ್ದರೆ ಆಗ್ತಾರೆ ಎಂದಿದ್ದಾರೆ. ಹಣೆಯಲ್ಲಿ ಬರೆದಿದ್ದರೆ ಆಗುತ್ತದೆ. ಎಲ್ಲರದ್ದು ವಿಧಿ ಏನು ಅಂತ ಮೊದಲೇ ತೀರ್ಮಾನ ಆಗಿರುತ್ತದೆ. ಅದರ ಪ್ರಕಾರ ಆಗುತ್ತದೆ. ಡಿಕೆ ಶಿವಕುಮಾರ್ ಎರಡೂವರೆ ವರ್ಷಕ್ಕೆ ಯಾಕೆ ಪ್ರಯತ್ನಿಸುತ್ತೀರಿ? ಮುಂದಿನ ಐದು ವರ್ಷದ ಅವಧಿಗೆ ಸಿಎಂ ಆಗಲಿ ಎಂದರು.
ಡಿಕೆಶಿಯಿಂದ ಪ್ರತ್ಯಂಗಿ ಹೋಮ ವಿಚಾರವಾಗಿ, ನನಗೆ ಪೂಜೆ, ಪುನಸ್ಕಾರ, ನಮನ ವಾಮಾಚಾರದ ಬಗ್ಗೆ ನಂಬಿಕೆ ಇಲ್ಲ. ಅಸಹಾಯಕರಿಗೆ ಒಳ್ಳೆಯದು ಮಾಡಿದರೆ ಅದೇ ಒಳ್ಳೆಯದು. ಯಾರೋ ಒಬ್ಬ ಅಸಹಾಯಕನಿಗೆ ತೊಂದರೆ ನೀಡಿದರೆ ಶಾಪ ಹಾಕುತ್ತಾನೆ. ಅದೇ ನಮಗೆ ಕೆಟ್ಟದಾಗುತ್ತದೆ. ಹಿಂದೆ ನನ್ನ ವಿರುದ್ಧ ಮಾಟ, ವಾಮಾಚಾರದ ಪ್ರಯೋಗ ನಡೆದಿತ್ತು. ಆ ಅನುಭವ ನನಗೆ ಆಗಿದೆ. ನಾನು ಯಾರಿಗೂ ಹೆದರಿಸುವವನು ಅಲ್ಲ ಎಂದು ಹೇಳಿದರು.