ಇಷ್ಟಕ್ಕೂ ಎಲ್ಲಾ ಹೊಸಾ ಸೋಂಕುಗಳಿಗೆ ಕೇರಳವೇ ಯಾಕೆ ಉಗಮ ಸ್ಥಾನ?!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊರೋನಾ, ನಿಫಾದಿಂದ ಹಿಡಿದು ಮತ್ತೀಗ ಮಂಕಿಪಾಕ್ಸ್‌ವರೆಗೆ ಎಲ್ಲ ಸೋಂಕುಗಳು ಕೇರಳದಲ್ಲೇ ಮೊದಲಿಗೆ ಪತ್ತೆಯಾಗುತ್ತಿವೆ. ಅಷ್ಟಕ್ಕೂ ದೇಶದಲ್ಲಿ ಯಾವುದೇ ಹೊಸ ಸೋಂಕು ಕಂಡು ಬಂದರೂ ಅದರ ಆರಂಭ ಕೇರಳದಿಂದಲೇ ಏಕಾಗುತ್ತಿದೆ ಎಂಬುದ ಕಿರು ಮಾಹಿತಿ ಇಲ್ಲಿದೆ.

ಕೊರೋನಾ, ನಿಫಾ ಮತ್ತು ಮಂಕಿಪಾಕ್ಸ್ ಇವೆಲ್ಲದರಲ್ಲೂ ಇರುವ ಸಾಮಾನ್ಯ ಸಂಗತಿ ಎಂದರೆ, ಎಲ್ಲವೂ ವೈರಾಣು ಸೋಂಕುಗಳು. ಅದರಲ್ಲಿಯೂ ಇವೆಲ್ಲವೂ ಮೊದಲಿಗೆ ಪತ್ತೆಯಾಗಿದ್ದು ದಕ್ಷಿಣ ಭಾರತದ ಕೇರಳದಲ್ಲಿ. ಈ ೩ ಸೋಂಕುಗಳ ಹೊರತಾಗಿ ಕೇರಳ ಈ ಹಿಂದೆ ಕಾಡಿದ್ದ ಚಿಕೂನ್‌ಗುನ್ಯಾ, ಜಪಾನೀಸ್ ಎನ್ಸಿಫಾಲಿಟಿಸ್, ಅಕ್ಯೂಟ್ ಎನ್ಸಿಫಾಲಿಟಿಸ್ ಸಿಂಡ್ರೋಮ್, ವೆಸ್ಟ್ ನೀಲ್ ಎನ್ಸಿಫಾಲಿಟಿಸ್, ಡೆಂಘಿ ಮತ್ತು ವೈರಲ್ ಹೆಪಾಟೈಟಿಸ್‌ನ ಮೊದಲ ಸೋಂಕುಗಳು ಸಹ ಪತ್ತೆಯಾಗಿರುವುದು ಕೇರಳದಲ್ಲಿಯೇ ಎನ್ನುವುದು ಗಮನಾರ್ಹ.

ನಿಗಾ ವ್ಯವಸ್ಥೆಯು ಹೆಚ್ಚು ಸೂಕ್ಷ್ಮತೆಯಿಂದ ಕೂಡಿರದ ಹಿನ್ನೆಲೆ ಸೋಂಕುಗಳು ಮೊದಲಿಗೆ ಕೇರಳದಲ್ಲಿ ಪತ್ತೆಯಾಗಲು ಪ್ರಾಥಮಿಕ ಕಾರಣವಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ, ರಾಜ್ಯಕ್ಕೆ ಅತಿ ಹೆಚ್ಚಿನ ಸಂಖ್ಯೆಯ ವಲಸಿಗರು ಆಗಮಿಸುವುದರಿಂದಲೂ ಮೊದಲ ಪ್ರಕರಣ ದಾಖಲಾಗುತ್ತಿರುವುದಕ್ಕೆ ಕಾರಣ ಎಂದು ಸಹ ತಜ್ಞರು ತಿಳಿಸಿದ್ದಾರೆ. ಕೇರಳ ಹೊರತಾಗಿ ಮಹಾರಾಷ್ಟ್ರ ಮತ್ತು ದಿಲ್ಲಿ ಈ ಎರಡು ರಾಜ್ಯಗಳಲ್ಲಿಯೂ ಗರಿಷ್ಠ ಸಂಖ್ಯೆಯ ಅಂತಾರಾಷ್ಟ್ರೀಯ ಪ್ರಯಾಣಿಕರು ಆಗಮಿಸುವುದರಿಂದ ಇಲ್ಲಿಯೂ ಹೆಚ್ಚಿನ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!