ಅಕ್ರಮ ಹಣ ವರ್ಗಾವಣೆ ಪ್ರಕರಣಗಳಲ್ಲಿ ಬಂಧಿಸುವ ಅಧಿಕಾರ ಜಾರಿ ನಿರ್ದೇಶನಾಲಯಕ್ಕಿದೆ: ಸುಪ್ರಿಂ ಕೋರ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಮನಿ ಲಾಂಡರಿಂಗ್ ತಡೆ (ಪಿಎಂಎಲ್‌ಎ) ಕಾಯ್ದೆಯಡಿ ವಿಚಾರಣೆ, ಬಂಧನ ಮತ್ತು ಆಸ್ತಿಯನ್ನು ಲಗತ್ತಿಸುವ ಜಾರಿ ನಿರ್ದೇಶನಾಲಯದ ಅಧಿಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಎತ್ತಿಹಿಡಿದಿದೆ.

ನ್ಯಾಯಮೂರ್ತಿ ಎಎಂ ಖಾನ್ವಿಲ್ಕರ್ ನೇತೃತ್ವದ ಪೀಠವು ಇಡಿ ನಡೆಸಿದ ಬಂಧನ, ವಶಪಡಿಸಿಕೊಳ್ಳುವಿಕೆ ಮತ್ತು ತನಿಖೆಯ ಪ್ರಕ್ರಿಯೆಯನ್ನು ಪ್ರಶ್ನಿಸಿ ಮತ್ತು ಪಿಎಂಎಲ್‌ಎಯ ನಿಬಂಧನೆಗಳ ವ್ಯಾಖ್ಯಾನವನ್ನು ಕೋರಿ ಸಲ್ಲಿಸಿದ ಅರ್ಜಿಗಳನ್ನು ವಿಚಾರಿಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.

ಇಡಿ, ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಶನ್ ಆಫೀಸ್ (ಎಸ್‌ಎಫ್‌ಐಒ) ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ನಂತಹ ತನಿಖಾ ಸಂಸ್ಥೆಗಳು ಪೋಲೀಸರಲ್ಲ, ಆದ್ದರಿಂದ ವಿಚಾರಣೆಯ ಸಮಯದಲ್ಲಿ ಅವರು ದಾಖಲಿಸಿದ ಹೇಳಿಕೆಗಳನ್ನು ಸಾಕ್ಷ್ಯಗಳಾಗಿ ಮಾನ್ಯ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಅಲ್ಲದೇ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಬಂಧನದ ಕಾರಣವನ್ನು ಬಹಿರಂಗಪಡಿಸುವುದು ಕಡ್ಡಾಯವಲ್ಲ ಹಾಗೂ ಆರೋಪಿಗಳಿಗೆ ಇಸಿಐಆರ್ (ದೂರು ಪ್ರತಿ) ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪಿಎಂಎಲ್‌ಎಯ ವಿವಿಧ ನಿಬಂಧನೆಗಳ ಸಿಂಧುತ್ವವನ್ನು ಸರ್ವೋಚ್ಛ ನ್ಯಾಯಾಲಯವು ಎತ್ತಿಹಿಡಿದಿದೆ ಮತ್ತು ಕಾಯಿದೆಯಡಿಯಲ್ಲಿ ಜಾಮೀನಿಗೆ ಕಠಿಣ ಷರತ್ತುಗಳು ಕಾನೂನುಬದ್ಧವೇ ಆಗಿದೆ ಎಂದು ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!