ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ದರ್ಶನ್ ಗಾಗಿ ಪೂಜೆ ಯಾಕೆ ಮಾಡ್ಬಾರ್ದು? ಕನ್ನಡ ಚಿತ್ರರಂಗ ಈ ಮಟ್ಟಕ್ಕೆ ಬರಲು ಅವನು ಕೂಡ ಸಾಕಷ್ಟು ಕಷ್ಟ ಪಟ್ಟಿದ್ದೇನೆ ಎಂದಿದ್ದಾರೆ ನಟಿ ಗಿರಿಜಾ ಲೋಕೇಶ್.
ನಟ ದರ್ಶನ್ ಬಿಡುಗಡೆ ಹಾಗೂ ಸ್ಯಾಂಡಲ್ ವುಡ್ ಒಳಿತಿಗಾಗಿ ಹೋಮ ಹವನ ನಡೆಸುತ್ತಿರುವ ವಿಚಾರಕ್ಕೆ ನಟಿ ಗಿರಿಜಾ ಲೋಕೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ನಟ ದರ್ಶನ್ ನಮ್ಮ ಕುಟುಂಬದ ಸದಸ್ಯರಾಗಿದ್ದು, ನಟ ದರ್ಶನ್ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರು ಕೂಡ ಕನ್ನಡ ಚಲನಚಿತ್ರೋದ್ಯಮಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಾಯಿ ತನ್ನ ಮಗನಿಗೆ ಒಳ್ಳೆಯದನ್ನು ಮಾಡಬೇಕೆಂದು ಬಯಸುವುದರಲ್ಲಿ ತಪ್ಪೇನಿಲ್ಲ. ‘ಕ್ರೌರ್ಯ’ ಮಾಡೋಕೆ ದರ್ಶನ್ ಗೆ ಬುದ್ದಿ ಕೊಟ್ಟಿದ್ದೇ ದೇವರು, ಅದಕ್ಕೆ ನಾವು ಈಗ ದೇವರ ಮೊರೆ ಹೋಗಿದ್ದೇವೆ ಎಂದು ತಿಳಿಸಿದ್ದಾರೆ.