ಗರ್ಭಿಣಿಯರಿಗೆ ಹೀಲ್ಸ್ ಧರಿಸದಂತೆ, ಫ್ಲಾಟ್ ಚಪ್ಪಲಿ ಧರಿಸುವಂತೆ ಹಿರಿಯರು ಹೇಳುತ್ತಾರೆ. ಇದಕ್ಕೆ ವೈಜ್ಞಾನಿಕ ಕಾರಣ ಏನು?
ಗರ್ಭಿಣಿಯರ ತೂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಜೊತೆಗೆ ಕಾಲುಗಳಲ್ಲಿ ಊತ ಕಾಣಿಸುತ್ತದೆ. ತೂಕ ಹೆಚ್ಚಾಗಿರುವುದರಿಂದ ಕೀಲುಗಳ ಮೇಲೆ ಹೆಚ್ಚು ಪ್ರೆಶರ್ ಇರುತ್ತದೆ. ಈ ವೇಳೆ ಹೀಲ್ಸ್ ಧರಿಸಿದರೆ ನಡೆದಾಡಲು ಕಷ್ಟವಾಗುತ್ತದೆ. ಜೊತೆಗೆ ಕಾಲು ಎಡವಿದರೆ ಉಳುಕುವುದು, ಕಾಲು ಮುರಿಯುವುದು ಅಥವಾ ಬೀಳುವ ಸಾಧ್ಯತೆಯೂ ಇದೆ.