BUDGET | ಈ ಬಾರಿ ಮಧ್ಯಂತರ ಬಜೆಟ್ ಮಂಡನೆ ಏಕೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೇನು ಕೆಲವೇ ಸಮಯದಲ್ಲಿ ನಿರ್ಮಲಾ ಸೀತಾರಾಮನ್ ಅವರು ಸತತವಾಗಿ ಆರನೇ ಬಾರಿ ಬಜೆಟ್ ಮಂಡನೆ ಮಾಡಲಿದ್ದಾರೆ.

ಈ ಬಾರಿ ಮಧ್ಯಂತರ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಆದರೆ ಯಾಕೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ..

ಚುನಾವಣೆಗೆ ಹೋಗುವುದಕ್ಕೂ ಮುನ್ನ ಯಾವುದೇ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲು ಸಾಧ್ಯವಿಲ್ಲ. ಇದಕ್ಕಾಗಿಯೇ ಲೇಖಾನುದಾನ, ಮಧ್ಯಂತರ ಬಜೆಟ್‌ಮಂಡಿಸಲಾಗುತ್ತಿದೆ.

ಲೇಖಾನುದಾನ ಎಂದರೆ ಈ ವರ್ಷದ ಮೊದಲ ಎರಡು ತಿಂಗಳ ಅವಧಿಗೆ ಸರ್ಕಾರಿ ಖರ್ಚು ಹಾಗೂ ನೌಕರರಿಗೆ ಸಂಬಳಕ್ಕೆ ಬೇಕಾದ ಹಣವನ್ನು ಬೊಕ್ಕಸದಿಂದ ಖರ್ಚು ಮಾಡಲು ಅನುಮತಿ ಪಡೆಯಲಾಗುತ್ತದೆ. ಇದರಲ್ಲಿ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅಂಕಿ ಅಂಶಗಳೇ ಇರುತ್ತವೆ. ಇಲ್ಲಿ ತೆರಿಗೆ ದರ ಬದಲಾವಣೆ ಮಾಡಲು ಅಥವಾ ಹೊಸ ಯೋಜನೆಗಳನ್ನು ಪ್ರಕಟಿಸಲು ಆಗುವುದಿಲ್ಲ.

ಏಪ್ರಿಲ್ ೧ರಿಂದ ಅನ್ವಯವಾಗುವಂತೆ ನಾಲ್ಕು ತಿಂಗಳ ಅವಧಿಗೆ ಮಂಡಿಸಲಾಗುವ ಬಜೆಟ್ ಇದಾಗಿದೆ. ಇಲ್ಲಿ ಹೊಸ ಯೋಜನೆಗಳನ್ನು ಘೋಷಿಸಬಹುದು, ತೆರಿಗೆ ದರವನ್ನೂ ಬದಲಿಸಬಹುದು. ಆದರೆ ಮುಂದೆ ಬರುವ ಸರ್ಕಾರ ಮಂಡಿಸುವ ಪೂರ್ಣ ಪ್ರಮಾಣದ ಬಜೆಟ್‌ನಲ್ಲಿ ಇವುಗಳನ್ನು ಬದಲಿಸುವ ಅವಕಾಶ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!