ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲಿನ ದೌರ್ಜನ್ಯ ಹಾಗೂ ಅವರ ಆಸ್ತಿ-ಪಾಸ್ತಿ, ಮಂದಿರಗಳ ಮೇಲಿನ ದಾಳಿಗಳು ಜಾಸ್ತಿ ಆಗುತ್ತಿದೆ. ಭಾರತದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ಈ ಕುರಿತು ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪ್ರತಿಕ್ರಿಯಿಸಿದ್ದು, ಇಂತಹ ವಿಷಯಗಳ ಬಗ್ಗೆ ಮೌನ ವಹಿಸುತ್ತಿರುವುದು ಏಕೆ. ಹಿಂದುಗಳ ಮೇಲಿನ ಹಲ್ಲೆ, ದೌರ್ಜನ್ಯವನ್ನು ನನ್ನಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ಶುಕ್ರವಾರ ಮಾತನಾಡಿರುವ ಪವನ್ ಕಲ್ಯಾಣ್, ಹಿಂದುಗಳ ಮೇಲೆ ನಡೆಯುತ್ತಿರುವ ಹಲ್ಲೆ ನಮಗೆ ತೀವ್ರ ದುಖವಾಗುತ್ತಿದೆ. ಈ ವಿಚಯದ ಕುರಿತು ಯಾರೂ ಮಾತನಾಡುತ್ತಿಲ್ಲ. ಇದರ ಬಗ್ಗೆ ಜಾಗತಿಕ ಮಟ್ಟದಲ್ಲಿ ಏಕೆ ಮೌನವಾಗಿದ್ದಾರೆ ಎನ್ನುವುದೇ ನನಗೆ ತಿಳಿಯುತ್ತಿಲ್ಲ. ಹಿಂದುಗಳ ಮೇಲಿನ ದಾಳಿಯ ಬಗ್ಗೆ ನಮ್ಮದೇ ಹಿಂದುಗಳು ಹಾಗೂ ಕಾರ್ಯಕರ್ತರು ಸೈಲೆಂಟ್ ಆಗಿದ್ದಾರೆ. ಅವರು ಇದನ್ನು ಪ್ರಶ್ನಿಸಬೇಕು. ಮತ್ತು ಅಂತಾರಾಷ್ಟ್ರೀಯ ಗಮನಕ್ಕೆ ತರಬೇಕು ಎಂದು ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ನಮ್ಮ ಹಿಂದುಗಳ ನಂಬಿಕೆ ಮತ್ತು ಸಂಸ್ಕೃತಿಯನ್ನು ಅಪಹಾಸ್ಯ ಮಾಡಲಾಗುತ್ತದೆ. ಕಾರಣ ಇಲ್ಲದೆ ಒಂದು ಧರ್ಮವನ್ನು ಗುರಿಯಾಗಿಸುವುದು ಅನ್ಯಾಯ. ಯಾರೂ ಬೇರೆ ಧರ್ಮದ ಬಗ್ಗೆ ಅಪಹಾಸ್ಯ ಮಾಡಲು ಧೈರ್ಯ ಮಾಡುವುದಿಲ್ಲ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಸನಾತನ ಮಂಡಳಿ ಸ್ಥಾಪಿಸಬೇಕು ಎಂದು ಡಿಸಿಎಂ ಸಲಹೆ ನೀಡಿದರು. ಹಿಂದು ದೇವಸ್ಥಾನಗಳ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, ವೈಎಸ್‌ಆರ್ ಪಕ್ಷದ ಅಧಿಕಾರವಧಿಯಲ್ಲಿ ತಿರುಪತಿಯಲ್ಲಿನ ತಿರುಮಲ ವೆಂಕಟೇಶ್ವರ ದೇವಸ್ಥಾನದ ಕಲಬೆರಿಕೆ ಪ್ರಸಾದ ನೀಡಿದ್ದು, ನನಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರ ಮನಸ್ಸಿಗೆ ನೋವಾಗಿದೆ ಎಂದಿದ್ದಾರೆ,
ಇಸ್ಕಾನ್ ಮುಖಂಡ ಚಿನ್ಮೋಯ್ ಕೃಷ್ಣ ದಾಸ್’ ಅವರನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿರುವುದನ್ನು ಖಂಡಿಸಲು ನಾವೆಲ್ಲರೂ ಒಂದಾಗೋಣ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶ ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ ಮತ್ತು ಮನವಿ ಮಾಡುತ್ತೇವೆ. ಬಾಂಗ್ಲಾದೇಶ ರಚನೆಗಾಗಿ ಭಾರತೀಯ ಸೇನೆಯ ರಕ್ತ ಚೆಲ್ಲಿದೆ, ನಮ್ಮ ಸಂಪನ್ಮೂಲಗಳನ್ನು ವ್ಯಯಿಸಲಾಗಿದೆ, ನಮ್ಮ ಸೇನಾ ಯೋಧರ ಪ್ರಾಣವನ್ನು ಕಳೆದುಕೊಂಡಿದ್ದಾರೆ. ನಮ್ಮ ಹಿಂದು ಸಹೋದರ ಸಹೋದರಿಯರನ್ನು ಗುರಿಯಾಗಿಸಲಾಗುತ್ತಿರುವ ರೀತಿಯಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ ಎಂದು ಪವನ್ ಕಲ್ಯಾಣ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.