ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾನವನ ದೇಹದ ಪ್ರಮುಖ ಅಂಗ ಅಂದರೆ ಚರ್ಮ. ಚರ್ಮವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರಿಂದ ವಿವಿಧ ರೋಗಕಾರಕ ಬ್ಯಾಕ್ಟೀರಿಯಾಗಳಿಂದ ರಕ್ಷಿಸಿಕೊಳ್ಳಬಹುದು. ಚರ್ಮದ ನೈರ್ಮಲ್ಯವನ್ನು ಅನುಸರಿಸದಿದ್ದರೆ ನರಹುಳಿಗಳ ರಚನೆಗೆ ಮುಖ್ಯ ಕಾರಣವಾಗುತ್ತದೆ. ಮುಖ, ಕುತ್ತಿಗೆ ಮತ್ತು ಗಂಟಲು ಸೇರಿದಂತೆ ದೇಹದ ಕೆಲ ಭಾಗಗಳಲ್ಲಿ ನರಹುಲಿಗಳು ಒಂದೇ ಪ್ರದೇಶದಲ್ಲಿ ಹೆಚ್ಚಾಗಿ ರೂಪುಗೊಳ್ಳುತ್ತವೆ. ಇವು ನೋಡುಗರಿಗೆ ಅಸಹ್ಯ ಹುಟ್ಟಿಸುತ್ತವೆ ಜೊತೆಗೆ ಕೆಲ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ನರಹುಳಿ ತಡೆಯಲು ರಕ್ಷಣಾ ಕ್ರಮಗಳು
ಆಗಾಗ ಮುಖ, ಗಂಟಲು ಮತ್ತು ಕುತ್ತಿಗೆಯನ್ನು ತಣ್ಣೀರಿನಿಂದ ಸ್ವಚ್ಛಗೊಳಿಸುವುದರಿಂದ ನರಹುಳಿ ಮೇಲೆ ಕೊಳಕು ಸಂಗ್ರಹವಾಗುವುದನ್ನು ತಡೆಯುತ್ತದೆ. ಹೈಡ್ರೋಜನ್ ಪೆರಾಕ್ಸೈಡ್ನೊಂದಿಗೆ 6 ಹನಿ ರೋಸ್ ವಾಟರ್ ಮತ್ತು ಫ್ಲವರ್ ರಸವನ್ನು ಸೇರಿಸಿ ಹತ್ತಿ ಉಂಡೆಯಿಂದ ಸ್ವಚ್ಛಗೊಳಿಸಿ. ತಿಂಗಳಿಗೊಮ್ಮೆ ಹರ್ಬಲ್ ಬ್ಲೀಚ್ಗೆ ಒಳಗಾಗುವುದು ಸೂಕ್ತ. ಇದು ಸಂಗ್ರಹವಾದ ಮಣ್ಣನ್ನು ತೆಗೆದುಹಾಕುತ್ತದೆ. ಮೇಕಪ್ ಹಾಕಿಕೊಂಡರೆ ರಾತ್ರಿ ಮಲಗುವ ಮುನ್ನ ಮುಖವನ್ನು ಕ್ಲೀನ್ ಮಾಡಬೇಕು. ಕೆಳದರ್ಜೆಯ ಕ್ರೀಮ್ಗಳನ್ನು ಬಳಸದಿರುವುದು ಉತ್ತಮ.
ಮುಖ ಮತ್ತು ಕತ್ತಿನ ಸುತ್ತಲಿನ ಪ್ರದೇಶವು ಸೂರ್ಯನ ಕಿರಣಗಳಿಗೆ ತೆರೆದುಕೊಳ್ಳುತ್ತದೆ. ಹುಳಿ ಮಜ್ಜಿಗೆಯನ್ನು 10 ದಿನಕ್ಕೊಮ್ಮೆ ಕುದಿಸಿ ಮುಖಕ್ಕೆ ಹಬೆ ನೀಡುವುದು ಸೂಕ್ತ. ಗಿಡಮೂಲಿಕೆಗಳೂ ಕೂಡ ನರಹುಳಿ ತೆಗೆದುಹಾಕಲು ಸಹಾಯ ಮಾಡುತ್ತದೆ. ಸಮಸ್ಯೆ ತೀವ್ರವಾಗಿದ್ದರೆ ಚರ್ಮರೋಗ ವೈದ್ಯರ ಬಳಿ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ.