August 13, 2026
Thursday, August 13, 2026
spot_img

ಊಟ ಮಾಡೋವಾಗ ಮಾತಾಡಬಾರದಂತೆ ಯಾಕೆ? ಗೊತ್ತಾದ್ರೆ ನೀವೂ ಕೂಡ ಚುಪ್ ಚಾಪ್ ಆಗಿ ತಿಂತೀರ

ನಾವು ಹಲವಾರು ಬಾರಿ ‘ಊಟ ಮಾಡ್ತಾ ಇದ್ದಾಗ ಮಾತಾಡಬೇಡ’ ಅಂತ ಹೇಳೋದು ಕೇಳಿದ್ದೇವೆ. ಹಿರಿಯರು ಹೇಳೋ ಈ ಸಲಹೆ ಕೇವಲ ಸಂಸ್ಕಾರಕ್ಕಾಗಿ ಅಲ್ಲ, ಅದರ ಹಿಂದೆ ಆರೋಗ್ಯಕ್ಕೂ ಸಂಬಂಧಿಸಿದ ಕಾರಣಗಳಿವೆ.

ಮೊದಲಿಗೆ, ಊಟ ಮಾಡುವಾಗ ಮಾತಾಡಿದರೆ ಆಹಾರ ಸರಿಯಾಗಿ ಜಗಿಯೋದಿಲ್ಲ. ಇದು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಚೆನ್ನಾಗಿ ಜಗಿದು ತಿನ್ನಿದರೆ ಮಾತ್ರ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಇನ್ನೊಂದು ಮುಖ್ಯ ಕಾರಣ, ಮಾತಾಡುತ್ತಾ ತಿಂದರೆ ಆಹಾರ ಉಸಿರಿನ ನಾಳಗಳಿಗೆ ಹೋಗುವ ಅಪಾಯ ಇರುತ್ತದೆ. ಇದರಿಂದ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ವಿಶೇಷವಾಗಿ ಮಕ್ಕಳಿಗೆ ಇದು ಹೆಚ್ಚು ಅಪಾಯಕಾರಿ.

ಇದನ್ನೂ ಓದಿ:

ಮತ್ತೊಂದು ವಿಷಯ, ಶಾಂತವಾಗಿ ತಿನ್ನುವುದರಿಂದ ಮನಸ್ಸು ಆಹಾರದಲ್ಲೇ ಇರುತ್ತದೆ. ಇದರಿಂದ ನಾವು ಎಷ್ಟು ತಿನ್ನುತ್ತಿದ್ದೇವೆ ಎಂಬುದನ್ನು ಗಮನಿಸಬಹುದು. ಅತಿಯಾಗಿ ತಿನ್ನುವುದನ್ನು ತಪ್ಪಿಸಬಹುದು.

ಆಯುರ್ವೇದದ ಪ್ರಕಾರವೂ, ಊಟ ಮಾಡುವಾಗ ಮನಸ್ಸು ಶಾಂತವಾಗಿರಬೇಕು. ಮಾತನಾಡುವುದು, ಟಿವಿ ನೋಡುವುದು, ಫೋನ್ ನೋಡುವುದು ಇವುಗಳೆಲ್ಲ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತವೆ.

ಹೀಗಾಗಿ, ಊಟದ ಸಮಯವನ್ನು ಒಂದು “ಶಾಂತ ಕ್ಷಣ”ವಾಗಿ ತೆಗೆದುಕೊಂಡರೆ ಆರೋಗ್ಯಕ್ಕೂ ಉತ್ತಮ, ಆಹಾರದ ರುಚಿಯನ್ನೂ ಸಂಪೂರ್ಣವಾಗಿ ಅನುಭವಿಸಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !