ಶೂನ್ಯ ಸುತ್ತಿದ 6 ಆಟಗಾರರು! ಟೆಸ್ಟ್‌ ಕ್ರಿಕೆಟ್‌ ನಲ್ಲಿ ಹೀನಾಯ ದಾಖಲೆ ಬರೆದ ಬಾಂಗ್ಲಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿರುವ ಬಾಂಗ್ಲಾದೇಶ ಟೆಸ್ಟ್ ಇತಿಹಾಸದಲ್ಲಿ ಅತಿಕೆಟ್ಟ ದಾಖಲೆಯೊಂದನ್ನು ನಿರ್ಮಿಸಿದೆ. ಆಂಟಿಗುವಾದ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ಆಯೋಜನೆಗೊಂಡಿರುವ ಉಭಯ ರಾಷ್ಟ್ರಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ 6 ಆಟಗಾರರು ಶೂನ್ಯಕ್ಕೆ ಔಟ್‌ ಆಗುವ ಮೂಲಕ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ  6 ಆಟಗಾರರು ಶೂನ್ಯ ಸುತ್ತಿದ ವಿಶ್ವದ ಮೊದಲ ತಂಡ ಎಂಬ ಕುಖ್ಯಾತಿಗೆ ಬಾಂಗ್ಲಾದೇಶ ಪಾತ್ರವಾಗಿದೆ.
ಪಂದ್ಯದ ಮೊದಲ ದಿನವೇ ಬಾಂಗ್ಲಾದೇಶ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ತಂಡದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಇದರಿಂದಾಗಿ ತಂಡವು ಇತಿಹಾಸದ ಪುಟಗಳಲ್ಲಿ ಹೆಸರು ಮಾಡಿದೆ. ಬಾಂಗ್ಲಾದೇಶದ ಆರು ಆಟಗಾರರು ಸೊನ್ನೆ ಸುತ್ತಿ ವಿಕೆಟ್ ಕಳೆದುಕೊಂಡರು.
ಬಾಂಗ್ಲಾದೇಶದ ಆಟ ಎಷ್ಟು ಕೆಟ್ಟದಾಗಿತ್ತು ಎಂದರೆ ತಂಡ ಟೆಸ್ಟ್‌ ಕ್ರಿಕೆಟ್‌ ನ ಅತ್ಯಂತ ಕಳಪೆ ಮೊತ್ತಕ್ಕೆ ಆಲೌಟ್‌ ಆಗಲಿದೆ ಎಂದೇ ಭಾವಿಸಲಾಗಿತ್ತು. ಬಾಂಗ್ಲಾದೇಶದ ಆರಂಭಿಕ ಆಟಗಾರ ಮಹಮ್ಮದುಲ್ ಹಸನ್ ಜಾಯ್ ಅವರ ಚಿಕೆಟ್‌ ಪತನದೊಂದಿಗೆ ಬಾಂಗ್ಲಾ ಪತನವೂ ಪ್ರಾರಂಭಗೊಂಡಿತು. ತಂಡದ ಮೊತ್ತ 1 ರನ್ ಆಗಿದ್ದಾಗ ಜಾಯ್ ಗೋಲ್ಡನ್ ಡಕ್ ಆದರು. ಪಂದ್ಯದ ಎರಡನೇ ಎಸೆತದಲ್ಲಿ ಅವರು  ರೋಚ್‌ಗೆ ಬಲಿಯಾದರು.
ಆದರೆ ನಂತರ ಶೂನ್ಯಕ್ಕೆ ಔಟಾಗುವ ಸರಮಾಲೆ ಆರಂಭವಾಯಿತು. ತಂಡದ ಸ್ಕೋರ್ 3 ರನ್ ಆಗಿದ್ದಾಗ ಶಾಂಟೊ ಎರಡನೇ ವಿಕೆಟ್‌ ರೂಪದಲ್ಲಿ ವಿಕೆಟ್‌ ಒಪ್ಪಿಸಿದರು.  ಮೂರನೇ ವಿಕೆಟ್ ರೂಪದಲ್ಲಿ ಮೊನಿಮುಲ್ ಕೂಡ 6 ಎಸೆತಗಳನ್ನು ಎದುರಿಸಿ ಖಾತೆ ತೆರೆಯದೆ ಔಟಾದರು. 2 ಎಸೆತಗಳನ್ನು ಆಡಿದ ನೂರುಲ್ ಹಸನ್ ಶೂನ್ಯಕ್ಕೆ ಔಟಾದರು. ಮುಸ್ತಾಫಿಜುರ್ ರೆಹಮಾನ್ ಕೂಡ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು. ಆಬಳಿಕ ಬಂದ  ಖಲೀಲ್ ಅಹ್ಮದ್ ಸಹ ಶೂನ್ಯಸುತ್ತಿವುದರೊಂದಿಗೆ ಶೂನ್ಯಕ್ಕೆ ಮರಳಿದ ಆರನೇ ಆಟಗಾರು. ಈ ಮೂಲಕ ಬಾಂಗ್ಲಾ ವಿಶೇಷ ಕುಖ್ಯಾತಿಗೆ ಪಾತ್ರವಾಯಿತು.
ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ನೆಲಕಚ್ಚಿ ನಿಂತಿದ್ದ ನಾಯಕ ಶಕೀಬ್ ಅಲ್ ಹಸನ್ ಬಾಂಗ್ಲಾ ಮಾನ ಉಳಿಸಿದರು. 67 ಎಸೆತಗಳನ್ನು ಎದುರಿಸಿದ ಶಕೀಬ್ 6 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 51 ರನ್ ಗಳಿಸಿ ಔಟಾದರು.

ಸತತ ಎರಡನೇ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿ ದಾಖಲೆ!
ಇದಕ್ಕೂ ಮುನ್ನ ಮೇ ತಿಂಗಳಲ್ಲಿ ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವೆ ನಡೆದಿದ್ದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಬಾಂಗ್ಲಾ ಇದೇ ಸಾಧನೆ ಮಾಡಿತ್ತು. ಈ ಪಂದ್ಯದಲ್ಲಿ ಸಹ ಬಾಂಗ್ಲಾದೇಶದ 6 ಬ್ಯಾಟ್ಸ್‌ಮನ್‌ಗಳು ಖಾತೆ ತೆರೆಯದೆ ವಿಕೆಟ್ ಕಳೆದುಕೊಂಡಿದ್ದರು. ಹೀಗೆ ಸತತ ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಬ್ಯಾಟ್ಸ್ ಮನ್ ಗಳು ಕಳಪೆ ಪ್ರದರ್ಶನ ನೀಡುವ ಮೂಲಕ ನಾಚಿಕೆಗೇಡಿನ ದಾಖಲೆ ಬರೆದಿದ್ದಾರೆ. ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ ಎರಡು ಪಂದ್ಯಗಳಲ್ಲಿ ಆರು ಬ್ಯಾಟ್ಸ್‌ಮನ್‌ಗಳನ್ನು ಶೂನ್ಯಕ್ಕೆ ಕಳೆದುಕೊಂಡ ವಿಶ್ವದ ಮೊದಲ ತಂಡವಾಗಿದೆ. ಶ್ರೀಲಂಕಾ ವಿರುದ್ಧದ ಆ ಟೆಸ್ಟ್ ಪಂದ್ಯವನ್ನು ಬಾಂಗ್ಲಾ 10 ವಿಕೆಟ್‌ಗಳಿಂದ ಸೋತಿತ್ತು.

ಪಂದ್ಯದ ಸ್ಥಿತಿ
ಆಂಟಿಗುವಾ ಟೆಸ್ಟ್‌ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತ ಬಾಂಗ್ಲಾದೇಶ ಬ್ಯಾಟಿಂಗ್‌ಗೆ ಇಳಿಯಿತು. ಕಳಪೆ ಆಟದ ನಂತರ ತಂಡ 103 ರನ್‌ಗಳಿಗೆ ಆಲೌಟ್ ಆಯಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ದಿನದ ಅಂತ್ಯದ ವೇಳೆಗೆ ಅವರು 2 ವಿಕೆಟ್ ಕಳೆದುಕೊಂಡು 95 ರನ್ ಗಳಿಸಿದೆ. ಇದೀಗ ಕೆರಿಬಿಯನ್ ತಂಡ ಬಾಂಗ್ಲಾ ತಂಡದ ಸ್ಕೋರ್ ನಿಂದ ಕೇವಲ 8 ರನ್ ಅಂತರದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!