ಬಿಹಾರದಲ್ಲಿ 30 ಬೀದಿ ನಾಯಿಗಳನ್ನು ಗುಂಡು ಹಾರಿಸಿ ಹತ್ಯೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಿಹಾರದಲ್ಲಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ 30 ಬೀದಿ ನಾಯಿಗಳಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಇಲ್ಲಿನ ಬೇಗುಸರಾಯ್ ಜಿಲ್ಲೆಯಲ್ಲಿ ಶೂಟರ್‌ಗಳ ತಂಡವು ಸುಮಾರು 30 ಬೀದಿ ನಾಯಿಗಳನ್ನು ಹೊಡೆದುರುಳಿಸಿದೆ.

ಈ ಜಿಲ್ಲೆಯಲ್ಲಿ ನಾಯಿಗಳ ಹಾವಳಿಯನ್ನು ಕೊನೆಗೊಳಿಸಲು ಪಾಟ್ನಾದಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಮತ್ತು ಪರಿಸರ ಇಲಾಖೆಯಿಂದ ತಂಡವನ್ನು ರಚಿಸಲಾಗಿದೆ.ಪಾಟ್ನಾದಿಂದ ಆಗಮಿಸಿದ ವಿಶೇಷ ತಂಡ ಮಂಗಳವಾರ 16 ಬೀದಿನಾಯಿಗಳು ಮತ್ತು ಬುಧವಾರ 14 ಬೀದಿ ನಾಯಿಗಳನ್ನು ಶೂಟ್ ಮಾಡಿ ಕೊಂದಿದೆ.

ಈ ನಾಯಿಗಳು ಗ್ರಾಮದಲ್ಲಿ ಸಾಕಷ್ಟು ಜನರನ್ನು ಕಚ್ಚಿ ಸಾಯಿಸಿದ್ದವು. 2022ರಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ನರಭಕ್ಷಕ ನಾಯಿಗಳು ದಾಳಿ ನಡೆಸಿದ್ದವು. ಈ ನಾಯಿಗಳ ಹಾವಳಿಯನ್ನು ತಡೆಯುವ ಪ್ರಯತ್ನದಲ್ಲಿ ಜಿಲ್ಲಾಡಳಿತವು ಕ್ರಮ ಕೈಗೊಂಡು ಬೀದಿ ನಾಯಿಗಳನ್ನು ಕೊಲ್ಲಲು ಆದೇಶಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!