ಪತ್ನಿ ಆತ್ಮಹತ್ಯೆಯನ್ನು ತಡೆಯದೆ ವಿಡಿಯೋ ಮಾಡಿದ ಪತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಈತ ಮಾಡಿರುವ ಕೆಲಸ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿದೆ. ತನ್ನ ಪತ್ನಿ ಕಣ್ಣೆದುರಿಗೇ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದರೂ ತಡೆಯದೆ, ವಿಡಿಯೋ ಮಾಡುವಲ್ಲಿ ನಿರತನಾಗಿದ್ದಾನೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮೃತರನ್ನು ಶೋಬಿತಾ ಗುಪ್ತಾ ಎಂದು ಗುರುತಿಸಲಾಗಿದೆ. ಶೋಬಿತಾ ಮತ್ತು ಸಂಜೀವ್ ಗುಪ್ತಾ ಕಳೆದ ಐದು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ದಂಪತಿ ನಡುವೆ ಸದಾ ಕಲಹವಾಗುತ್ತಲೇ ಇತ್ತು ಎಂದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಅಂದೂ ಕೂಡಾ ಜಗಳ ಮಾಡಿಕೊಂಡೇ ರೂಂಗೆ ಹೋದ ಶೋಬಿತಾ ನೇಣು ಹಾಕಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದಾಳೆ. ಎಲ್ಲವನ್ನೂ ನೋಡಿದ ಪತಿ. ಅದನ್ನು ತಡೆಯದ ವಿಡಿಯೋ ಮಾಡಿಕೊಂಡಿದ್ದಾನೆ.

ಶೋಬಿತಾ ತಂದೆ ತಾಯಿಗೆ ನೋಡಿ ನಿಮ್ಮ ಮಗಳು ಎಂತಹ ನ್ಯೂಸೆನ್ಸ್‌ ಮಾಡುತ್ತಿದ್ದಾಳೆ ಎಂದು ಹೇಳಲು ಈ ವಿಡಿಯೋ ಮಾಡಿದ್ದಾನಂತೆ. ತಡೆಯುವಷ್ಟರಲ್ಲಿ ಅನಾಹುತ ನಡೆದುಹೋಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!