ಪತಿಯ ಹಣ, ವಿಸಾ, ಪಾಸ್ ಪೋಟ್೯, ದಾಖಲೆಯೊಂದಿಗೆ ಪತ್ನಿ ಪರಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಗಲ್ಫ್‌ನಿಂದ ಊರಿಗೆ ಮರಳಿದ್ದ ದಂಪತಿಯ ಮಧ್ಯೆ ವಿರಸ ಕಂಡು ಬಂದಿದ್ದು, ಬಳಿಕ ಪತಿಯ ಹಣ, ಪಾಸ್‌ಪೋರ್ಟ್ ಸಹಿತ ಇತರ ದಾಖಲೆಪತ್ರಗಳೊಂದಿಗೆ ಪತ್ನಿ ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

ಚೌಕಿ ಆಝಾದ್‌ನಗರ ನಿವಾಸಿ ಅಬ್ದುಲ್ಲ ಎಂಬವರು ಈ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದು, ಅದರಂತೆ ಅಬ್ದುಲ್ಲರ ಪತ್ನಿ ಆಯಿಷಾಬಿ (30) ಎಂಬಾಕೆಯ ವಿರುದ್ಧ ವಂಚನಾ ಕೇಸು ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.

ಅಬ್ದುಲ್ಲ , ಅವರ ಪತ್ನಿ ಆಯಿಷಾಬಿ ಹಾಗೂ ನಾಲ್ವರು ಮಕ್ಕಳು ಗಲ್ಫ್‌ನಲ್ಲಿ ವಾಸವಾಗಿದ್ದರು. ಒಂದು ವಾರದ ಹಿಂದೆಯಷ್ಟೇ ದಂಪತಿಯು ಮಕ್ಕಳ ಜೊತೆಗೆ ಊರಿಗೆ ಆಗಮಿಸಿದ್ದರು. ಅನಂತರ ಪತಿ ಪತ್ನಿಯ ಮಧ್ಯೆ ವಾಗ್ವಾದ ಉಂಟಾಯಿತು ಎನ್ನಲಾಗಿದೆ. ಅಲ್ಲದೆ ಅಬ್ದುಲ್ಲ ನಿದ್ರಿಸುತ್ತಿದ್ದಾಗ ಅವರ ವೀಸಾ, ಪಾಸ್‌ಪೋರ್ಟ್, 50 ಸಾವಿರ ರೂ. ನಗದು, ಭೂಮಿಯ ದಾಖಲೆಪತ್ರ ಇತ್ಯಾದಿಗಳನ್ನು ತೆಗೆದುಕೊಂಡು ಪತ್ನಿ ಮಕ್ಕಳ ಜೊತೆಗೆ ತಲೆಮರೆಸಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!