ಹೊಸದಿಗಂತ ಡಿಜಿಟಲ್ ಡೆಸ್ಕ್:
ಪತ್ನಿಯೊಬ್ಬಳು ತಮ್ಮ ಮೊದಲ ಆನಿವರ್ಸರಿಗೆ ಗಿಫ್ಟ್ ಕೊಡದ ಗಂಡನಿಗೆ ಚಾಕು ಇರಿದಿದ್ದಾಳೆ.
ಬೆಂಗಳೂರಿನ ಬೆಳ್ಳಂದೂರಿನಲ್ಲಿ ಘಟನೆ ನಡೆದಿದೆ. ಮೊದಲ ವಾರ್ಷಿಕೋತ್ಸವದಂದು ರಾತ್ರಿ ಹನ್ನೆರಡು ಗಂಟೆಗೆ ವಿಶ್ ಮಾಡದೇ ಪತಿ ನಿದ್ದೆಗೆ ಜಾರಿದ್ದ.
ಗಿಫ್ಟ್ ಕೊಟ್ಟಿಲ್ಲ, ವಿಶ್ ಕೂಡ ಮಾಡಿಲ್ಲ ಎಂದು ಸಿಟ್ಟಿಗೆದ್ದ ಪತ್ನಿ ಅಡುಗೆ ಮನೆಗೆ ಹೋಗಿ ಚಾಕು ತಂದು ಚುಚ್ಚಿದ್ದಾಳೆ. ಅದೃಷ್ಟವಶಾತ್ ಬರೀ ಕೈಗೆ ಗಾಯ ಆಗಿದೆ.
ಬೆಳ್ಳಂದೂರು ಠಾಣೆಯಲ್ಲಿ ದೂರು ದಾಖಲಾಗಿದ್ದು, ಗಂಡ-ಹೆಂಡರಿಗೆ ಕೌನ್ಸಲಿಂಗ್ ಮಾಡಲಾಗಿದೆ. ಗಿಫ್ಟ್ ಕೊಟ್ಟಿಲ್ಲ ಅದಕ್ಕಾಗಿ ಹೀಗೆ ಮಾಡಿದೆ ಎಂದು ಪತ್ನಿ ಒಪ್ಪಿಕೊಂಡಿದ್ದಾಳೆ. ಇತ್ತ ಪತಿ ತನ್ನ ತಾತ ತೀರಿ ಹೋದ ಕಾರಣ ನೋವಿನಲ್ಲಿದ್ದೇನೆ ಸೆಲೆಬ್ರೇಷನ್ಗೆ ಮೂಡ್ ಇರಲಿಲ್ಲ ಎಂದು ಹೇಳಿದ್ದಾನೆ.