ಐಪಿಎಲ್​ ಅಖಾಡಕ್ಕೆ ಎಂಟ್ರಿ ಕೊಡ್ತಾರಾ ಮೋಸ್ಟ್​​​ ಪವರ್​ ಫುಲ್ ಬ್ಯಾಟ್ಸ್​​​ಮನ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭೀಕರ ರಸ್ತೆ ಅಪಘಾತಕ್ಕೆ ಒಳಗಾದ ರಿಷಬ್ ಪಂತ್ ಫಿಟ್ನೆಸ್ ಪರೀಕ್ಷೆ ನಡೆಸಲಾಗಿದ್ದು. ನಿನ್ನೆ ಬೆಂಗಳೂರಿನ ಎನ್ ಸಿಎಯಲ್ಲಿ ಪಂತ್ ಅವರ ಫಿಟ್ನೆಸ್ ಪರೀಕ್ಷೆ ನಡೆಸಲಾಗಿತ್ತು. ಫಲಿತಾಂಶಗಳು ಇನ್ನೂ ಲಭ್ಯವಾಗಿಲ್ಲ. ಈ ವಾರ ರಿಪೋರ್ಟ್ ಬರುವ ನಿರೀಕ್ಷೆಯಿದೆ.

ಐಪಿಎಲ್ ಗೆ ಮತ್ತೆ ಹಿಂತಿರುಗಲು ತಯಾರಾಗುತ್ತಿರುವ ರಿಷಬ್ ಪಂತ್ ಬೆಡ್ ರೆಸ್ಟ್‌ನಿಂದ ಎದ್ದ ನಂತರ, ಅವರು ದೀರ್ಘಕಾಲದವರೆಗೆ ಹಗಲು ರಾತ್ರಿ ಜಿಮ್‌ನಲ್ಲಿ ತೂಕ ಇಳಿಸಿಕೊಂಡು ಮತ್ತೆ ಆರೋಗ್ಯವಾಗಿರಲು ಕೂಡ ಪ್ರಯತ್ನಿಸುತ್ತಿದ್ದಾರೆ. ಈ ಎಲ್ಲಾ ಪ್ರಯತ್ನಗಳಿಗೆ ಉತ್ತರ ಫಿಟ್ನೆಸ್ ಪರೀಕ್ಷೆಯಲ್ಲಿ ಸಿಗಲಿದೆ.

ಫಿಟ್ನೆಸ್ ಪರೀಕ್ಷೆಯಲ್ಲಿ ಪಂತ್ ತೇರ್ಗಡೆಯಾದರೆ ಅಭಿಮಾನಿಗಳಿಗೆ ಇದಕ್ಕಿಂತ ಸಿಹಿ ಸುದ್ದಿ ಮತ್ತೊಂದಿಲ್ಲ. ಐಪಿಎಲ್ ಮಾರ್ಚ್ 22 ರಂದು ಪ್ರಾರಂಭವಾಗುತ್ತಿದ್ದು. ರಿಷಬ್ ಪಂತ್ ಮೈದಾನಕ್ಕೆ ಯಾವಾಗ ರೀ ಎಂಟ್ರಿ ಮಾಡ್ತಾರೆ ಅನ್ನೋದೇ ಫ್ಯಾನ್ಸ್ ಗಳ ಪ್ರಶ್ನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!