June 29, 2026
Monday, June 29, 2026
spot_img

ದರ್ಶನ್ ನೆನೆದು ಪತ್ನಿ ವಿಜಯಲಕ್ಷ್ಮಿ ಭಾವುಕ: ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಯ್ತು ರೋಮ್ಯಾಂಟಿಕ್ ಪೋಸ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೂರವಾದಾಗಲೇ ಪ್ರೀತಿಪಾತ್ರರ ಮೌಲ್ಯ ತಿಳಿಯುತ್ತದೆ ಎನ್ನು ಮಾತು ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಅವರ ಇಂದಿನ ಪರಿಸ್ಥಿತಿಗೆ ಅನ್ವಯಿಸಿದಂತಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಬೇಲ್ ರದ್ದಾಗಿ, 2025ರ ಆಗಸ್ಟ್‌ನಿಂದ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ ಸದ್ಯ ಏಕಾಂಗಿಯಾಗಿದ್ದಾರೆ. ಇತ್ತ ಮನೆಯಲ್ಲಿ ಪತಿಗಾಗಿ ಕಾಯುತ್ತಿರುವ ವಿಜಯಲಕ್ಷ್ಮಿ, ದರ್ಶನ್ ನೆನಪಿನಲ್ಲಿ ಭಾವುಕರಾಗಿದ್ದಾರೆ.

‘ತಾರಕ್’ ಚಿತ್ರದ ಹಾಡಿನ ಮೂಲಕ ಪ್ರೀತಿ ನಿವೇದನೆ

ಸೋಮವಾರ ಬೆಳ್ಳಂಬೆಳಗ್ಗೆ ವಿಜಯಲಕ್ಷ್ಮಿ ಅವರು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಸುಂದರ ಜೋಡಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ಬ್ಯಾಕ್‌ಗ್ರೌಂಡ್ ಆಗಿ ‘ತಾರಕ್’ ಚಿತ್ರದ ‘ಹೇಗಾದರೂ ಮಾತಾಡು ನೀ’ ಎಂಬ ರೋಮ್ಯಾಂಟಿಕ್ ಹಾಡನ್ನು ಬಳಸಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯದ ಈ ಮಧುರ ಗೀತೆ ವಿಜಯಲಕ್ಷ್ಮಿ ಅವರ ಸದ್ಯದ ಮನದ ಭಾವನೆಗಳಿಗೆ ಕನ್ನಡಿ ಹಿಡಿದಂತಿದೆ.

ವಾರಕ್ಕೆರಡು ಬಾರಿ ಭೇಟಿ; ತಪ್ಪದ ಒಡನಾಟ

ಜೈಲಿನಲ್ಲಿದ್ದರೂ ಪತಿಯ ಮೇಲಿನ ಪ್ರೀತಿ ಕಮ್ಮಿಯಾಗಿಲ್ಲ. ವಾರಕ್ಕೆ ಎರಡು ಬಾರಿ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಭೇಟಿಯಾಗುವುದನ್ನು ವಿಜಯಲಕ್ಷ್ಮಿ ಎಂದಿಗೂ ತಪ್ಪಿಸಿಲ್ಲ. ಆದರೆ, ಸದ್ಯ ಪತಿಯ ನೆನಪು ತೀವ್ರವಾಗಿ ಕಾಡುತ್ತಿರುವುದರಿಂದ ಈ ವಿಶೇಷ ಕಪಲ್ ಫೋಟೋ ಶೇರ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !