May 17, 2026
Sunday, May 17, 2026
spot_img

ಮೇಕೆದಾಟು ಬಳಿ ಪ್ರವಾಸಿಗರ ಮೇಲೆ ಕಾಡಾನೆ ಅಟ್ಯಾಕ್: ಎದ್ನೋಬಿದ್ನೋ ಅಂತ ಓಡಿದ ಜನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಂಗಮ–ಮೇಕೆದಾಟು ಪ್ರವಾಸಿ ತಾಣದಲ್ಲಿ ಕಾಡಾನೆ ಏಕಾಏಕಿ ಪ್ರವಾಸಿಗರತ್ತ ದೌಡಾಯಿಸಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಕಾವೇರಿ ನದಿಯ ತೀರದಲ್ಲಿ ಪ್ರವಾಸಿಗರು ವಿಹರಿಸುತ್ತಿದ್ದ ವೇಳೆ ಈ ಅನಿರೀಕ್ಷಿತ ಘಟನೆ ನಡೆದಿದ್ದು, ಸ್ಥಳದಲ್ಲಿದ್ದವರು ಭಯದಿಂದ ಓಡಿದ್ದಾರೆ.

ಕನಕಪುರ ತಾಲೂಕಿನ ಸಂಗಮ ಅರಣ್ಯ ಪ್ರದೇಶದಲ್ಲಿ ನೀರು ಕುಡಿಯಲು ನದಿಯತ್ತ ಬಂದಿದ್ದ ಒಂಟಿ ಸಲಗ, ಜನಸಂದಣಿ ಕಂಡು ಉದ್ರಿಕ್ತಗೊಂಡು ಪ್ರವಾಸಿಗರತ್ತ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ. ಆತಂಕಗೊಂಡ ಜನರು ಪ್ರಾಣ ಉಳಿಸಿಕೊಳ್ಳಲು ಓಡಿದಾಗ, ಒಬ್ಬ ಮಹಿಳೆ ಆನೆಯ ದಾಳಿಗೆ ಸಿಲುಕಿದ್ದಾರೆ. ದಾಳಿಯಿಂದ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ:

ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಕಾಡಾನೆ ಅಲ್ಲಿಂದ ಕಾಡಿನೊಳಗೆ ತೆರಳಿದೆ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !