June 24, 2026
Wednesday, June 24, 2026
spot_img

ಬೊಮ್ಮನಳ್ಳಿ ಜಲಾಶಯದಲ್ಲಿ ತೇಲಿಬಂದ ಕಾಡಾನೆ ಶವ: ಸಾವಿನ ಹಿಂದಿರೋ ಕಾರಣವಾದ್ರೂ ಏನು?

ಹೊಸದಿಗಂತ ವರದಿ ದಾಂಡೇಲಿ:

ಬೊಮ್ಮನಳ್ಳಿ ಜಲಾಶಯದಲ್ಲಿ ಕಾಡಾನೆಯೊಂದರ ಮೃತದೇಹ ಪತ್ತೆಯಾದ ಘಟನೆ ನಡೆದಿದೆ.

ಮೃತ ಆನೆಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಜಲಾಶಯದಿಂದ ಆನೆಯ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:

ಮೃತ ಕಾಡಾನೆ ಸುಮಾರು 9 ರಿಂದ 10 ವರ್ಷದ ಗಂಡು ಆನೆ ಎಂದು ಗುರುತಿಸಲಾಗಿದೆ. ಆನೆಯ ಸಾವಿನ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತಿಳಿದು ಬರಲಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !