ಹೊಸದಿಗಂತ ವರದಿ ಹಾಸನ:
ಒಂಟಿಯಾಗಿ ಕಾಣಿಸಿಕೊಳ್ಳುತ್ತಿರುವ ನಾಲೈದು ಕಾಡಾನೆಗಳು ತೋಟ, ಗದ್ದೆಗಳನ್ನು ತುಳಿದು ನಾಶಪಡಿಸುತ್ತಿರುವ
ಘಟನೆಗಳು ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಪದೆ ಪದೇ ಮರುಕಳಿಸುತ್ತಿದೆ.
ಸೂರುಕೋಡು ಗ್ರಾಮದಲ್ಲಿ ರಾತ್ರಿ ಸಂಚಾರ ಮಾಡುತ್ತಿರುವ ಒಂಟಿ ಕಾಡಾನೆಯಿಂದ ಗ್ರಾಮಸ್ಥರು ಮನೆಯೊರಗಡೆ ಬರಲು ಹಿಂಜರಿಯುತ್ತಿದ್ದಾರೆ. ಬೆಳ್ಳಂಬೆಳಗ್ಗೆಯೇ ಗ್ರಾಮಕ್ಕೆ ಎಂಟ್ರಿ ಕೊಡುತ್ತಿರುವ ಕಾಡಾನೆಯಿಂದ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಲು ಭಯಪಡುವಂತಹ ವಾತಾವರಣ ಸೃಷ್ಠಿಯಾಗಿದೆ.
ಅನುಘಟ್ಟ ಗ್ರಾಮದ ಎನ್.ಎನ್ ನಾಗರಾಜ್ ಹಾಗೂ ಎ.ಎನ್ ಸದಾಶಿವರವರ ಒಡೆತನದ ಗದ್ದೆಗಳಲ್ಲಿ ಸಮೃದ್ಧವಾಗಿ ಬೆಳದಿದ್ದ ಪೈರನ್ನು ಎರಡು ಕಾಡಾನೆಗಳು ತುಳಿದು ಹಾಳು ಮಾಡಿವೆ.
ಹಗಲು ಹಾಗೂ ರಾತ್ರಿ ಮುಖ್ಯ ರಸ್ತೆಗಳಲ್ಲಿ ಸಂಚಾರ ಮಾಡುತ್ತಿರುವುದರಿಂದ ವಾಹನ ಸವಾರರು ಕತ್ತಲಾಗುವ ಮುಂಚೆಯೆ ಮನೆ ಸೇರಿಕೊಳ್ಳುತ್ತಿದ್ದು, ಕಾಡಾನೆ ಸಮಸ್ಯೆಗೆ ಪರಿಹಾರ ನೀಡುವಲ್ಲಿ ವಿಫಲವಾದ ಅರಣ್ಯ ಇಲಾಖೆಗೆ ಹಾಗೂ ಸರಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.