ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಬಲವಾದ ಗಾಳಿಯಿಂದಾಗಿ ಬೆಂಕಿ ವೇಗವಾಗಿ ಹರಡಿದೆ ಎಂದು ವರದಿಯಾಗಿದೆ.
ಐದು ಗಂಟೆಗಳಲ್ಲಿ 62 ಕಿ.ಮೀ ಪ್ರದೇಶಕ್ಕೆ ಕಾಡ್ಗಿಚ್ಚು ವ್ಯಾಪಿಸಿ ಹಲವು ಮನೆಗಳನ್ನು ನಾಶಪಡಿಸಿದೆ.
3,000 ಕ್ಕೂ ಹೆಚ್ಚು ಕಟ್ಟಡಗಳು ಬೆಂಕಿಯಿಂದ ಆವರಿಸಿರುವ ಸಾಧ್ಯತೆ ಇದೆ. ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಲಾಸ್ ಏಂಜಲೀಸ್ ಬಳಿ 10,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಬೆಂಕಿ ಹರಡುತ್ತಿದ್ದಂತೆ ರಕ್ಷಣಾ ತಂಡಗಳನ್ನು ತಕ್ಷಣವೇ ಸ್ಥಳಕ್ಕೆ ಕಳುಹಿಸಲಾಗಿದ್ದು, ಬೆಂಕಿಯನ್ನು ನಂದಿಸುವ ಕೆಲಸ ಪ್ರಾರಂಭವಾಗಿದೆ.