ಬಿಸಿಸಿಐ ಮುಖ್ಯ ಆಯ್ಕೆಗಾರ ಹುದ್ದೆಗೆ ಮುಂಬೈ ಮಾಜಿ ಆಟಗಾರನ ಹೆಸರು ಫೈನಲ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಟಿ 20 ವಿಶ್ವಕಪ್‌ ನಲ್ಲಿ ಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಆಯ್ಕೆ ಸಮಿತಿಯನ್ನು ವಜಾಗೊಳಿಸಿರುವ ಬಿಸಿಸಿಐ ಹೊಸ ಮುಖ್ಯ ಆಯ್ಕೆಗಾರರ ​​ಹುಡುಕಾಟವನ್ನು ಪ್ರಾರಂಭಿಸಿದೆ. ಜೊತೆಗೆ ಹೊಸ ಆಯ್ಕೆ ಸಮಿತಿಗೆ ಅರ್ಜಿಗಳಿಗೆ ಮುಕ್ತ ಕರೆಯನ್ನು ಸಹ ನೀಡಿದೆ.
ಮಾಧ್ಯಮ ಮೂಲಗಳ ಪ್ರಕಾರ, ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ಅವರು ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಗೆ ಬಿಸಿಸಿಐನ ಮೊದಲ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.
ಅಜಿತ್ ಅವರು ಕ್ರಿಕೆಟ್ ನ ಎಲ್ಲಾ ಮೂರು ಫಾರ್ಮ್ಯಾಟ್‌ ನಲ್ಲೂ ಆಡಿದ್ದು, ಐಪಿಎಲ್‌ನಲ್ಲೂ ಕಾಣಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ತಂಡದ ಆಯ್ಕೆಯಲ್ಲಿ ಅವರ ಜ್ಞಾನ ಮತ್ತು ಅಭಿಪ್ರಾಯವು ಮೌಲ್ಯಯುತವಾಗಬಹುದು. ಐಪಿಎಲ್‌ನಲ್ಲಿ ಯುವ ಆಟಗಾರರೊಂದಿಗೆ ಕೆಲಸ ಮಾಡಿದ ಅವರು ಅವರೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ. ಇದಲ್ಲದೇ ದೇಶೀಯ ಕ್ರಿಕೆಟ್ ಬಗ್ಗೆಯೂ ಅವರಿಗೆ ಉತ್ತಮ ಜ್ಞಾನವಿದೆ ಎಂದು ಬಿಸಿಸಿಐ ಪರಿಗಣಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಜಿತ್ ಅಗರ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್‌ನ ಡೆಲ್ಲಿ ಕ್ಯಾಪಿಟಲ್ಸ್‌ನ ಸಹಾಯಕ ಕೋಚ್ ಆಗಿದ್ದಾರೆ. ಮುಖ್ಯ ಆಯ್ಕೆದಾರರಾಗಲು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಿರುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!