ಫೈಲ್‌ಗಂಟಿದ ನೇಲ್‌ಪಾಲಿಶ್..‌ ಸಾನಿಯಾಳ ನಿಜ ರೂಪ ಬಯಲು ಮಾಡ್ತಾಳ ಭುವಿ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʼಕನ್ನಡತಿʼ ಧಾರವಾಹಿಯು ಶೀಘ್ರದಲ್ಲಿ ಮುಕ್ತಾಯಗೊಳ್ಳಲಿದೆ ಎಂಬ ಸುದ್ದಿಯಿದೆ. ಈ ವದಂತಿಯ ನಡುವೆಯೂ ಸಂಚಿಕೆಯು ಒಂದಷ್ಟು ಆಸಕ್ತಿಯುಕ್ತ ವಿಷಯಗಳನ್ನು ವೀಕ್ಷಕರ ಮುಂದಿಡುತ್ತಿದೆ.

ಧಾರವಾಹಿಯ ಖಳನಾಯಕಿ ಸಾನಿಯಾ ಭುವಿ ಮತ್ತು ಹರ್ಷನ ಏಳ್ಗೆಯನ್ನು ಸದಾ ಹತ್ತಿಕ್ಕುವ ಪ್ರಯತ್ನದಲ್ಲಿದ್ದಾಳೆ. ಈ ಪ್ರಯತ್ನದಲ್ಲಿ ಕೋಣೆಯಲ್ಲಿದ್ದ ದಾಖಲೆಗಳನ್ನು ಅಡಿಗಿಸಿಕೊಳ್ಳುತ್ತಾಳೆ. ಆದರೆ ಸಾನಿಯಾಳ ಗಂಡ ಅದನ್ನು ಹುಡುಕಿ ಭುವಿಯ ಕೈಗೆ ತಲುಪಿಸುತ್ತಾನೆ. ಫೈಲ್‌ ತೆರೆದು ನೋಡಿದ ಭುವಿಯ ಕಣ್ಣಿಗೆ ಫೈಲ್‌ಗಂಟಿದ ನೇಲ್‌ಪಾಲಿಶ್‌ ಕಂಡು ಸಾನಿಯಾಳನ್ನು ಪ್ರಶ್ನಿಸಲು ಮುಂದಾಗುತ್ತಾಳೆ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದ್ರೆ ಯಾರಿಗೂ ಕಾಣಲ್ಲ ಅಂತ ಅಂದುಕೊಂಡಿರುವ ಸಾನಿಯಾಳ ನಿಜ ಬಣ್ಣ ಬಯಲು ಮಾಡ್ತಾಳಾ ಭುವಿ ಎಂದು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!