Wednesday, February 8, 2023

Latest Posts

ನನ್ನ ಹೇಳಿಕೆಯನ್ನ ತಿರುಚಲಾಗಿದೆ‌: ಶಾಸಕರ ವಿರುದ್ಧ ಬೇಜಾವಾಬ್ದಾರಿ ಹೇಳಿಕೆಗೆ ಹರಿಪ್ರಸಾದ್ ಸಮರ್ಥನೆ

ಹೊಸದಿಗಂತ ವರದಿ ಬಾಗಲಕೋಟೆ: 

ಶಾಸಕರನ್ನು ವೇಶ್ಯೆಯರಿಗೆ ಹೋಲಿಸಿ ನಾಲಿಗೆ ಹರಿಬಿಟ್ಟಿದ್ದ ಕಾಂಗ್ರೆಸ್‌ ಮುಖಂಡ ತನ್ನ ಬೇಜಾವಾಬ್ದಾರಿ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ನನ್ನ ಹೇಳಿಕೆಯನ್ನ ತಿರುಚಲಾಗಿದೆ. ಅದರಲ್ಲೂ ಸಹ ಲೈಂಗಿಕ ಕಾರ್ಯಕರ್ತರ ಬಗ್ಗೆ ಉಲ್ಲೇಖದಲ್ಲಿ ಅನಗತ್ಯ ವಿವಾದ ಸೃಷ್ಠಿಗೆ ಯತ್ನ ಮಾಡಲಾಗುತ್ತಿದೆ ಎಂದರು.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರ ಬಗ್ಗೆ ನನಗೆ ಗೌರವ ಇದೆ. ನಾನು ಅವರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ. ಅದ್ಯಾಗ್ಯೂ ಒಬ್ಬ ತನ್ನನ್ನೇ ತಾನು ಮಾರಿಕೊಂಡ ಒಬ್ಬ ಪೊಲೀಸ್ ಅಧಿಕಾರಿ..ಹಾಗೂ ಒಬ್ಬ ಚಿತ್ರ ನಟ….ನಿನ್ನೆ ಮಾತಾಡಿದ್ದಾರೆ ಎಂದರು.

ಸಚಿವ ಬಿ.ಸಿ.ಪಾಟೀಲ್ ನಿನ್ನೆ ಮಾತಾಡಿದ್ದು, ಇವರು ಪೊಲೀಸ್ ಅಧಿಕಾರಿಯಾಗಿದ್ದಾಗ ಮಹಿಳೆಯರು ಪೊರಕೆ ಪೂಜಾ ಮಾಡಿದ್ದು ನಮಗೆ ಗೊತ್ತಿಲ್ವಾ? ಇಂದಲ್ಲ ನಾಳೆ ಜನ ಇವರಿಗೆ ಬುದ್ದಿ ಕಲಿಸ್ತಾರೆ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ರಾಜಮಾರ್ಗದಿಂದ ಬಂದವನು, ಇವರಂತೆ ಸಿಕ್ರೇಟ್ ಮಾರ್ಗದಿಂದ ಬಂದವನಲ್ಲ. ಫಿಲ್ಮಿ ಡೈಲಾಗ್ ಅಂತ ಹೇಳಿದ್ನಲ್ಲ.
ಒಬ್ಬ ಗಂಡಸು ಎನ್ನುವವನಿದ್ದರೆ ಅದನ್ನೆ ಸಾಬೀತು ಮಾಡಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ವಿರುದ್ಧ ಕಿಡಿಕಾರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!