ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸೌತ್ ನಟಿ ಕೀರ್ತಿ ಸುರೇಶ್ (Keerthy Suresh), ದಳಪತಿ ವಿಜಯ್ (Thalapathy Vijay) ಅವರನ್ನು ಮದುವೆ ಆಗುತ್ತಾರೆ ಎಂಬಾ ಸುದ್ದಿ ಸಿಕ್ಕಾಪಟ್ಟೆಹರಿದಾಡುತ್ತಿದ್ದು, ಈ ಬೆನ್ನಲ್ಲೇ ಕೀರ್ತಿ, ತಾಯಿ ಮೇನಕಾ (Menaka) ಪ್ರತಿಕ್ರಿಯೆ ನೀಡಿದ್ದಾರೆ.
ಕೆಲವು ದಿನಗಳಿಂದ ಓಡಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ. ಇದು ಕೇವಲ ಪ್ರಚಾರಕಷ್ಟೇ. ಇದೆಲ್ಲಾ ಕೇವಲ ಗಾಳಿ ಸುದ್ದಿ ಅಷ್ಟೇ ಎಂದು ಕೀರ್ತಿ ಅವರ ತಾಯಿ ಮೇನಕಾ ಸುರೇಶ್ ಮದುವೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮದುವೆ ಬಗ್ಗೆ ಯಾವುದೇ ರೀತಿಯ ಪ್ಲ್ಯಾನ್ ಮಾಡಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.
ಭೈರವ, ಸರ್ಕಾರ್ ಸಿನಿಮಾಗಳಲ್ಲಿ ಜೋಡಿಯಾಗಿ ವಿಜಯ್- ಕೀರ್ತಿ ನಟಿಸಿದ್ದರು. ಹಾಗಾಗಿ ಈ ಮದುವೆ ಸುದ್ದಿ ಹಬ್ಬಿತ್ತು. ಈ ಕಡೆ ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡುತ್ತಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆ 2ನೇ ಮದುವೆ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು.