ಮತ್ತೆ ಒಂದಾಗಲಿದ್ದಾರಾ ನಾಗಚೈತನ್ಯ- ಸಮಂತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ವರ್ಷಗಳ ಕಾಲ ಇಷ್ಟಪಟ್ಟು ಮದುವೆಯಾಗಿದ್ದ ಜೋಡಿ ಸಮಂತಾ-ನಾಗಚೈತನ್ಯ ಇದ್ದಕ್ಕಿದ್ದಂತೆಯೇ ವಿಚ್ಛೇದನ ಪಡೆದು ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

ವಿಚ್ಛೇದನದ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಜೋಡಿ ಇದೀಗ ಸಿನಿಮಾವೊಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಡಿವೋರ್ಸ್ ನಂತರ ಇಬ್ಬರೂ ಸಾರ್ವಜನಿಕವಾಗಿ ಎಲ್ಲಿಯೂ ಒಟ್ಟಿಗೇ ಕಾಣಿಸಿರಲಿಲ್ಲ. ಇನ್ನು ಸಮಂತಾ ಕಾಯಿಲೆ ಬಗ್ಗೆ ತಿಳಿದ ನಾಗಚೈತನ್ಯ ಸಮಂತಾ ಆರೋಗ್ಯ ವಿಚಾರಿಸಿದ್ದಾರೆ.

ವಿಚ್ಛೇದನದ ನಂತರವೂ ಇಬ್ಬರನ್ನು ಆನ್‌ಸ್ಕ್ರೀನ್‌ನಲ್ಲಿ ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಅಂತೆಯೇ ಇದೀಗ ಪ್ರಾಜೆಕ್ಟ್ ಒಂದಕ್ಕೆ ಇಬ್ಬರು ಸಹಿ ಹಾಕಿದ್ದು, ವೈಯಕ್ತಿಕ ಅಭಿಪ್ರಾಯ ಬಿಟ್ಟು ಕೆಲಸ ಮಾಡಲಿದ್ದಾರೆ.

ಸಮಂತಾ ಈಗಲೂ ನನ್ನ ಸ್ನೇಹಿತೆ ಎಂದು ನಾಗಚೈತನ್ಯ ಹೇಳಿಕೊಂಡಿದ್ದು, ಅಭಿಮಾನಿಗಳಿಗೆ ಈ ಜೋಡಿ ಒಂದಾಗುವ ಆಸೆ ಹುಟ್ಟಿಸಿದೆ. ಹೊಸ ಪ್ರಾಜೆಕ್ಟ್ ಬಗ್ಗೆ ಯಾವುದೇ ವಿವರ ಹೊರಬಂದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!