ʼಜೀವನದಲ್ಲಿ ಮತ್ತೆಂದೂ ಫುಟ್‌ಬಾಲ್ ನೋಡಲಾರೆ..ʼ ದುರಂತದಲ್ಲಿ ಕುಟುಂಬ ಕಳೆದುಕೊಂಡ ಅಭಿಮಾನಿಯ ನೋವಿನ ನುಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಳೆದ ವಾರ ಇಂಡೋನೇಷ್ಯಾದ ಸ್ಟೇಡಿಯಂನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ತನ್ನ ಪತ್ನಿ, ಇಬ್ಬರು ಹದಿಹರೆಯದ ಹೆಣ್ಣುಮಕ್ಕಳು ಮತ್ತು ಸೋದರ ಸಂಬಂಧಿಗಳನ್ನು ಕಳೆದುಕೊಂಡಿರುವ ನೋವಿನಲ್ಲಿರುವ 36 ವರ್ಷದ ರೈತ ಆಂಡಿ ಹರಿಯಾಂಟೊ, ʼತಾನು ಇನ್ನು ಮುಂದೆ ಜೀವನದಲ್ಲಿ ಮುಂದೆ ಯಾವತ್ತೂ ಫುಟ್ಬಾಲ್ ಪಂದ್ಯವನ್ನು ನೋಡುವುದಿಲ್ಲʼ ಎಂದು  ನೋವಿನಿಂದ ನುಡಿಯುತ್ತಾರೆ.
ಬಹಳಾ ಕಾಲದಿಂದ ಯೋಜಿಸಿದ್ದಂತೆ ಕಳೆದ ಶನಿವಾರ ಸ್ಥಳೀಯ ತಂಡದ ಅರೆಮಾ ಎಫ್‌ಸಿ ಆಟವನ್ನು ವೀಕ್ಷಿಸಲು ಆಂಡಿ ಕುಟುಂಬ ತೆರಳಿತ್ತು. ಫುಟ್‌ಬಾಲ್ ಆಟದ ಅಪ್ಪಟ ಅಭಿಮಾನಿಯಾದ ಆಂಡಿ ಅವರ ಎರಡು ವರ್ಷದ ಮಗ ಸೇರಿದಂತೆ ಅವರ ಕುಟುಂಬಕ್ಕೆ ಇದೊಂದು ವಿಶೇಷ ವಿಹಾರವಾಗಿತ್ತು.
ಇಂಡೋನೇಷ್ಯಾದ ಪೂರ್ವ ಜಾವಾ ಪ್ರಾಂತ್ಯದ ಮಲಾಂಗ್‌ನಲ್ಲಿರುವ ಕಿಕ್ಕಿರಿದ ಕ್ರೀಡಾಂಗಣವು ಪಂದ್ಯದ ಕೊನೆಯಲ್ಲಿ ರಣರಂಗವಾಯಿತು. ತನ್ನ ನೆಚ್ಚಿನ ತಂಡ ಸೋತಿದ್ದರಿಂದ ಆಕ್ರೋಶಗೊಂಡು ಕ್ರೀಡಾಂಗಣದೊಳಕ್ಕೆ ನುಗ್ಗಿದ  ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾರಿಸಿದ ನಂತರ ಅದು ಸಾವಿನ ಮನೆಯಾಯ್ತು. ದುರಂತದಲ್ಲಿ 131 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಇದು ವಿಶ್ವದ ಅತ್ಯಂತ ಕೆಟ್ಟ ಕ್ರೀಡಾಂಗಣ ದುರಂತಗಳಲ್ಲಿ ಒಂದಾಗಿದೆ.
ದುಋಂತದ ವೇಳೆ ಆಂಡಿ ಸ್ಟ್ಯಾಂಡ್‌ನಲ್ಲಿದ್ದರು. ಪರಿಸ್ಥಿತಿ ಪ್ರಕ್ಷ್ಯುಬ್ಧಗೊಳ್ಳುತ್ತಿರುವ ಸುಳಿವು ಸಿಕ್ಕುತ್ತಿದ್ದಂತೆ ಆಂಡಿ ತನ್ನ ಮಗನನ್ನು ತನ್ನ ತೋಳುಗಳಲ್ಲಿ ಅಪ್ಪಿಕೊಂಡು ಓಡಲಾರಂಭಿಸಿದ. ಆ ವೇಳೆ ಅವನ ಹೆಂಡತಿ ಮತ್ತು ಹೆಣ್ಣುಮಕ್ಕಳಿಂದ ಬೇರ್ಪಟ್ಟನು. ಅಶ್ರುವಾಯು ಸಿಡಿಸುವ ಮೂಲಕ ಎಡವಿಬಿದ್ದು ಹೇಗೋ ಕಾಲ್ತುಳಿತದಿಂದ ಪಾರಾಗಿ ಕ್ರೀಡಾಂಗಣದ ಹೊರಗೆ ಬಂದ.
“ಪೊಲೀಸರು ಸ್ಟ್ಯಾಂಡ್‌ ನತ್ತ ಗುಂಡು (ಅಶ್ರುವಾಯು) ಹಾರಿಸಬಾರದಿತ್ತು. ಅದರಿಂದಲೇ ಮೈದಾನದಲ್ಲಿ ಎಲ್ಲಾ ಅವ್ಯವಸ್ಥೆಗಳು ಉಂಟಾದವು ಎಂದು ಹೇಳಿದರು. ಕ್ರೀಡಾಂಗಣದಲ್ಲಿ ಹಬ್ಬಿದ್ದ ಹೊಗೆ ತೆರವುಗೊಂಡಾಗ ಆಂಡಿ ತನ್ನ ಹೆಂಡತಿ ಮತ್ತು ಹೆಣ್ಣುಮಕ್ಕಳನ್ನು ಹುಡುಕಲು ಪ್ರಾರಂಭಿಸಿದ.
“ನಾನು ಕಣ್ಣೀರಿಡುತ್ತಾ ಎಲ್ಲಾ ಮೃತ ದೇಹಗಳಲ್ಲಿ ನನ್ನವರಿಗಾಗಿ ಹುಡುಕುತ್ತಲೇ ಇದ್ದೆ, ಆ ವೇಳೆ ನನಗೆ ನನ್ನ 16 ಮತ್ತು 13 ವರ್ಷದ ಇಬ್ಬರು ಹೆಣ್ಣುಮಕ್ಕಳಾದ ನತಸ್ಯಾ ಮತ್ತು ನೈಲಾ ಮೃತದೇಹಗಳು ಸಿಕ್ಕವು. ಅವರು ಪಲಾಯನಕ್ಕೆ ಯತ್ನಿಸುವಾಗ ಜನರ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟಿದ್ದರು. ನನಗೆ ಉಸಿರು ಬಿಗಿದು ಬಂತು, ಅವರ ತಾಯಿಯನ್ನು ಹುಡುಕಲು ಕಣ್ಣೀರು ಒರೆಸಿಕೊಳ್ಳುತ್ತಾ ಹುಡುಕುತ್ತಿದ್ದೆ ಎಂದು ಅವರು ಗದ್ಘದಿತರಾದರು.  ಆಂಡಿಯ 34 ವರ್ಷದ ಪತ್ನಿ ತೀವ್ರವಾಗಿ ಗಾಯಗೊಂಡ  ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಲಿಯಾದವರಲ್ಲಿ 33 ಮಂದಿ 4 ರಿಂದ 17 ವರ್ಷದೊಳಗಿನ ಮಕ್ಕಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನಾನು ಇನ್ನು ಮುಂದೆ ಫುಟ್‌ಬಾಲ್ ಪಂದ್ಯಗಳನ್ನು ನೋಡುವುದಿಲ್ಲ. ಈಗ ನಾನು ನನ್ನ ಮಗನ ಬಗ್ಗೆ ಮಾತ್ರ ಯೋಚಿಸುತ್ತೇನೆ ಮತ್ತು ನನಗೆ ಬೇರೆ ಯಾವುದಕ್ಕೂ ಸಮಯವಿಲ್ಲ. ಈಗ ನನಗೆ ನಾಳೆಯ ಆಹಾರವನ್ನು ಹೇಗೆ ಹೊಂದಿಸಿಕೊಳ್ಳವುದು ಎಂಬುದಷ್ಟೇ ಮುಖ್ಯ” ಎಂದು ಆಂಡಿ ಹೇಳಿದರು.
ಫುಟ್‌ಬಾಲ್‌ನ ವಿಶ್ವ ಆಡಳಿತ ಮಂಡಳಿ ʼಫಿಫಾʼ ಪಂದ್ಯಗಳಲ್ಲಿ ʼಕ್ರೌಡ್ ಕಂಟ್ರೋಲ್ ಗ್ಯಾಸ್ʼ ಬಳಕೆಯನ್ನು ನಿಷೇಧಿಸಿದೆ. ಹಾಗಿದ್ದರೂ ಕೆಲವು ಅಧಿಕಾರಿಗಳು ಯಾವುದೇ ಆದೇಶವಿಲ್ಲದಿದದರೂ ಕ್ರೀಡಾಂಗಣದೊಳಗೆ ಅಶ್ರುವಾಯುವನ್ನು ತಪ್ಪಾಗಿ ಬಳಸಿದ್ದಾರೆ ಎಂದು ಇಂಡೋನೇಷ್ಯಾದ ಪೊಲೀಸ್ ವಾಚ್‌ಡಾಗ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!