ಚೀನಾದೊಂದಿಗೆ ಸಂಘರ್ಷ ಬೆನ್ನಲ್ಲೇ ಭಾರತಕ್ಕೆ ಸಿಕ್ಕಿತು ಮತ್ತಷ್ಟು ಬಲ: ಅಗ್ನಿ -5 ಕ್ಷಿಪಣಿ ರಾತ್ರಿ ಪರೀಕ್ಷೆ ಯಶಸ್ವಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಅಗ್ನಿ -5 ಕ್ಷಿಪಣಿ ಪರೀಕ್ಷೆ ಯಶಸ್ವಿ ಉಡಾವಣೆ ಮಾಡಲಾಯಿತು.

ಈ ಕುರಿತು ರಕ್ಷಣಾ ಇಲಾಖೆ ಮಾಹಿತಿ ನೀಡಿದ್ದು, 5000 ಕಿಲೋಮೀಟರ್ ಗುರಿ ತಲುಪುವ ಅಗ್ನಿ -5 ಕ್ಷಿಪಣಿಯನ್ನು ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದೆ.

ಅಗ್ನಿ-5 ಕ್ಷಿಪಣಿ 5,000 ಕಿ.ಮೀ.ಗೂ ಮೀರಿದ ಗುರಿಗಳನ್ನು ಅತಿ ಹೆಚ್ಚು ನಿಖರತೆಯೊಂದಿಗೆ ಹೊಡೆಯಬಲ್ಲದು. ಮೊದಲಿಗಿಂತ ಈಗ ಹಗುರವಾಗಿರುವ ಕ್ಷಿಪಣಿಯಲ್ಲಿ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಮೌಲ್ಯೀಕರಿಸಲು ಪರೀಕ್ಷೆಯನ್ನು ನಡೆಸಲಾಯಿತು.

ಅತ್ತ ಚೀನಾದೊಂದಿಗಿನ ಹೆಚ್ಚುತ್ತಿರುವ ಗಡಿ ಉದ್ವಿಗ್ನತೆಯ ನಡುವೆ, ಭಾರತ ಅಗ್ನಿ-5 ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿದ್ದು ಭಾರತಕ್ಕೆ ಮತ್ತಷ್ಟು ಬಲ ಸಿಕ್ಕಿದಂತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!