ಮತ್ತೆ ಒಂದಾಗ್ತಾರಾ ನಿವೇದಿತಾ ಗೌಡ, ಚಂದನ್‌ ಶೆಟ್ಟಿ?: ಕಣ್ಣೀರಿನ ಹಿಂದಿನ ಅಸಲಿ ವಿಷಯ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಗ್‌ ಬಾಸ್‌ ಮನೆಯಲ್ಲಿ ಪ್ರೀತಿಸಿ, ಮದುವೆಯಾಗಿದ್ದ ನಿವೇದಿತಾ ಗೌಡ, ಚಂದನ್‌ ಶೆಟ್ಟಿ ಅವರು ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಇತ್ತೀಚೆಗೆ ಅಂತ್ಯ ಹಾಡಿದ್ದರು. ಇದೀಗ ಇವರಿಬ್ಬರು ದಿಢೀರ್‌ ಸುದ್ದಿಗೋಷ್ಠಿ ಕರೆದು ಮಾಧ್ಯಮದ ಮುಂದೆ ಮಾತನಾಡಿದ್ದಾರೆ.

ಮನುಷ್ಯ ಅಂದಕೂಡಲೇ ಎಮೋಶನ್ಸ್‌ ಇರುತ್ತದೆ. ಹಾಗೆಯೇ ನಮಗೂ ನಾಲ್ಕು ವರ್ಷ ಜೊತೆಗಿದ್ದೆವು. ಈಗ ದೂರ ಆಗಿದ್ದೇವೆ. ನಿನ್ನೆ ರಾತ್ರಿಯಿಂದಲೇ ನಾನು ನನ್ನ ಮನಸ್ಸು ಗಟ್ಟಿಮಾಡಿಕೊಳ್ಳೋಣ ಅಂದುಕೊಂಡಿದ್ದೆ. ನಿಜಕ್ಕೂ ನಮಗೆ ಇದು ಎಮೋಶನಲ್‌ ಆಗಿರುತ್ತದೆ. ಪರ್ಸನಲ್‌, ಪ್ರೊಫೆಶನಲ್‌ ಎರಡನ್ನೂ ಒಟ್ಟಿಗೆ ತರೋದು ಒಳ್ಳೆಯದಲ್ಲ. ಆದರೆ ಇಬ್ಬರೂ ಕರಿಯರ್‌ನಲ್ಲಿ ಮುಂದುವರೆಯಲೇಬೇಕು. ಸಿನಿಮಾ ಕೆಲಸ ಆಗಿದ್ದರಿಂದ ಇಬ್ಬರೂ ಪ್ರೊಫೆಶನಲ್‌ ಆಗಿಯೇ ಇರ್ತೀವಿ. ಈ ಸಿನಿಮಾಕ್ಕೆ ನಾನು ಸಂಗೀತ ಸಂಯೋಜನೆ ಮಾಡಿಲ್ಲ. ಈ ಸಿನಿಮಾದಲ್ಲಿ ನಿವೇದಿತಾ ದೃಶ್ಯ ಜಾಸ್ತಿ ಇದೆ. ಅವರಿಗೆ ಬಾಯ್‌ಫ್ರೆಂಡ್‌ ಆಗಿ ಸಪೋರ್ಟ್‌ ಮಾಡಿರೋ ಪಾತ್ರದಲ್ಲಿ ನಾನು ನಟಿಸಿದ್ದೇನೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಚಂದನ್‌ ಶೆಟ್ಟಿ ಅವರನ್ನು ನೋಡಿ ನಿವೇದಿತಾ ಗೌಡ ಅವರು ಕಣ್ಣೀರು ಹಾಕುತ್ತಿರುವ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಇದನ್ನು ನೋಡಿ ಎಲ್ಲರೂ ಇವರಿಬ್ಬರು ಮತ್ತೆ ಒಂದಾದ್ರಾ ಅಂತ ಪ್ರಶ್ನೆ ಬಂದಿತ್ತು. ಅದಕ್ಕೆ ಉತ್ತರ ಕೊಟ್ಟ ನಿವೇದಿತಾ ಗೌಡ, ‘ನಾಲ್ಕು ವರ್ಷ ನಾವು ಒಂದು ಬಾಂಧವ್ಯ ಹೊಂದಿದ್ದೇವೆ. ನಿಜಕ್ಕೂ ಇದು ಎಮೋಶನಲ್‌ ಆಗಿತ್ತು. ಯಾವುದೇ ಪ್ರಾಜೆಕ್ಟ್‌ ಇದ್ದರೂ ಕೂಡ ಅದು ಮುಗಿಯುವಾಗ ಬೇಸರ ಆಗುತ್ತದೆ. ಹಾಗೆಯೇ ಈ ಸಿನಿಮಾ ಶೂಟಿಂಗ್‌ ಮುಗಿಯುತ್ತಿದೆ, ಹಾಗಾಗಿ ಅಳು ಬಂತು. ಈ ಸಿನಿಮಾ ಕಥೆ ತುಂಬ ಚೆನ್ನಾಗಿದೆ’ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!