ಭಾರತಕ್ಕೆ ಬಂದ ಹಾಲಿವುಡ್‌ ನಟ ʼವಿಲ್‌ ಸ್ಮಿತ್ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಖ್ಯಾತ ಹಾಲಿವುಡ್‌ ನಟ ‘ವಿಲ್‌ ಸ್ಮಿತ್‌ʼ ಮತ್ತೊಮ್ಮೆ ಭಾರತದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬೈ ಖಾಸಗಿ ಟರ್ಮಿನಲ್‌ ಒಂದರಲ್ಲಿ ನಿರ್ಗಮಿಸುತ್ತರುವ ಅವರ ವೀಡಿಯೋಗಳನ್ನು ʼಪಾಪರಾಜಿʼ ಗಳು ಸೆರೆಹಿಡಿದಿದ್ದು ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಅವರ ಈ ಭೇಟಿಯ ಹಿಂದಿರುವ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲವಾದರೂ ಅವರು ಸದ್ಗುರು ಅವರನ್ನುಬೇಟಿ ಮಾಡಲು ಬಂದಿರಬಹುದೆಂದು ಕೆಲವು ವದಂತಿಗಳು ಹೇಳುತ್ತಿವೆ. ಇನ್ನೂ ಕೆಲವು ವದಂತಿಗಳು ಅವರು ಇಸ್ಕಾನ್‌ ಮಂದಿರದಲ್ಲಿ ವಿಶೇಷ ಫೂಜೆಗೆ ಬಂದಿರಬಹುದೆಂದು ಊಹಿಸಿವೆ.

ʼವಿಲ್‌ ಸ್ಮಿತ್ʼ ಭಾರತಕ್ಕೆ ಬರುತ್ತಿರುವುದು ಇದೇ ಮೊದಲೇನಲ್ಲ. ಈಹಿಂದೆಯೂ ಕೂಡ ಹಲವು ಬಾರಿ ತಮ್ಮ ಕುಟುಂಬದವರೊಂದಿಗೆ ಅವರು ಭಾರತಕ್ಕೆ ಬೇಟಿ ನೀಡಿದ್ದಾರೆ. ಕೆಲವು ವರ್ಷಗಳ ಹಿಂದೆ ಸನಾತನ ಹಿಂದೂ ಧರ್ಮವನ್ನು ಸ್ವೀಕರಿಸಿರುವ ಅವರು ಹಲವು ಬಾರಿ ವಿಶೇಷ ಪೂಜೆ ಪುನಸ್ಕಾರಗಳಲ್ಲಿ ಭಾಗವಹಿಸಲೆಂದೇ ಭಾರತಕ್ಕೆ ಬರುತ್ತಾರೆ. ಅಲ್ಲದೇ ಸದ್ಗುರು ಅವರೊಂದಿಗೆ ಉತ್ತಮ ಒಡನಾಟ ಹೊಂದಿರುವ ಅವರು ಸದ್ಗುರು ಅವರೊಂದಿಗೆ ತಮ್ಮ ಮನೆಯಲ್ಲಿ ಮಾತನಾಡಿರುವ ವೀಡಿಯೋ ಈ ಹಿಂದೆ ವೈರಲ್‌ ಆಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!