ಹೊಸದಿಗಂತ ಡಿಜಿಟಲ್ ಡೆಸ್ಕ್:
೨೦೧೯ರ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯವೇ ಮಂಡ್ಯದತ್ತ ತಿರುಗಿ ನೋಡುವಂತೆ ಮಾಡಿದ್ದು ಸುಮಲತಾ ಅಂಬರೀಷ್!
ಹೌದು, ಅಂದು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಸ್ಫರ್ಧೆ ಮಾಡಿ ಗೆಲುವು ಸಾಧಿಸಿದ್ದರು. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದ್ದರೂ ಮಂಡ್ಯದಲ್ಲಿ ಸ್ವಾಭಿಮಾನಿ ಮಹಿಳೆ ಸುಮಲತಾಗೆ ಗೆಲುವು ಸಿಕ್ಕಿತ್ತು.
ತದನಂತರ ಸುಮಲತಾ ಬಿಜೆಪಿಗೆ ಬೆಂಬಲ ಘೋಷಣೆ ಮಾಡಿದ್ದರು, ಇದೀಗ ಮತ್ತೆ ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆ. ಮಂಡ್ಯ ಕ್ಷೇತ್ರವನ್ನು ಬಿಜೆಪಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿದೆ. ಈ ಕಡೆ ಬಿಜೆಪಿಯಿಂದ ಟಿಕೆಟ್ ಭರವಸೆಯಲ್ಲಿದ್ದ ಸುಮಲತಾಗೆ ತೀವ್ರ ನಿರಾಸೆಯಾಗಿದೆ.
ಇದೀಗ ಸುಮಲತಾ ಜೆಡಿಎಸ್-ಬಿಜೆಪಿ ಮೈತ್ರಿಗೆ ಬೆಂಬಲ ನೀಡಬೇಕಾ? ಅಥವಾ ಯಾವುದಕ್ಕೂ ಬೆಂಬಲ ನೀಡದೇ ಇರಬೇಕಾ? ಇಲ್ಲವಾ ಹಿಂದಿನ ಬಾರಿಯಂತೆಯೇ ಸ್ವತಂತ್ರ್ಯವಾಗಿ ಸ್ಪರ್ಧೆ ಮಾಡಬೇಕಾ ಎನ್ನುವ ಗೊಂದಲದಲ್ಲಿದ್ದಾರೆ.
ಇಂದು ಸುಮಲತಾ ಸಭೆಯೊಂದನ್ನು ಕರೆದಿದ್ದು ತಮ್ಮ ನಿರ್ಧಾರವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಸುಮಲತಾ ಜೊತೆ ದರ್ಶನ್ ಹಾಗೂ ಅಭಿಷೇಕ್ ಅಂಬರೀಷ್ ಇರಲಿದ್ದಾರೆ.